ನವದೆಹಲಿ, ಮೇ 13 (DaijiworldNews/SM): ಭಾರತ ತಂಡದ ಯುವ ಆಟಗಾರ ಬೌಲರ್ ಯಜುವೇಂದ್ರ ಚಾಹಲ್ ಅವರ ಪೋಷಕರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಮತ್ತೊಂದೆಡೆ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಅವರು, ಇನ್ಸ್ಟಾಗ್ರಾಮ್ನಲ್ಲಿ ಅತ್ತೆ ಮಾವರಿಗೆ ಸೋಂಕು ಇರುವ ವಿಚಾರ ಹಂಚಿಕೊಂಡಿದ್ದಾರೆ. ಚಾಹಲ್ ಅವರ ತಾಯಿ ಹೋಂ ಐಸೋಲೇಷನ್ ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನ ಹೆಚ್ಚಿನ ಲಕ್ಷಣಗಳಿಲ್ಲ. ಆದರೆ, ಅವರ ತಂದೆಯಲ್ಲಿ ರೋಗ ಲಕ್ಷಣಗಳು ಕಂಡುಬಂದಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ವಿವರಿಸಿದ್ದಾರೆ.
ಹೊರಗೆ ಪರಿಸ್ಥಿತಿ ತುಂಬಾ ಭಯಾನಕವಾಗಿದೆ. "ಎಲ್ಲರೂ ಮನೆಯಲ್ಲಿ ಇರಿ, ಮಾಸ್ಕ್ಧರಿಸಿ ಸುರಕ್ಷಿತವಾಗಿರಿ" ಎಂದು ಧನುಶ್ರೀಯವರು ಹೇಳಿದ್ದಾರೆ. ಇತ್ತೀಚೆಗೆ ಮಾಜಿ ಕ್ರಿಕೆಟಿಗರಾದ ಪಿಯೂಷ್ ಚಾವ್ಲಾ, ಆರ್.ಪಿ.ಸಿಂಗ್ ಅವರ ತಂದೆಯರು ಕೊರೋನಾದಿಂದ ಮೃತಪಟ್ಟಿದ್ದರು. ಇನ್ನು ಈಗಾಗಲೇ ಕೊರೋನಾ ಹಿನ್ನೆಲೆಯಲ್ಲಿ ಐಪಿಎಲ್ ಸರಣಿ ರದ್ದಾಗಿದೆ. ಇದೀಗ ಕೆಲವು ಆಟಗಾರರು ಹಾಗೂ ಅವರ ಕುಟುಂಬಸ್ಥರಲ್ಲೂ ಸೋಂಕು ಪತ್ತೆಯಾಗಿದೆ.