ಇಸ್ಲಾಮಾಬಾದ್, ಮೇ 27 (DaijiworldNews/SM): ಭ್ರಷ್ಟಾಚಾರ ತಡೆ ಪುನಶ್ಚೇತನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಪಾಕಿಸ್ತಾನ ಕ್ರಿಕೆಟಿಗ ಉಮರ್ ಅಕ್ಮಲ್ ಬರೋಬ್ಬರಿ 45 ಲಕ್ಷ ರೂಪಾಯಿ ದಂಡ ಪಾವತಿಸಿದ್ದಾರೆ.
45 ಲಕ್ಷ ರುಪಾಯಿಗಳನ್ನು ಉಮರ್ ಅಕ್ಮಲ್ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ದಂಡ ರೂಪದಲ್ಲಿ ಕಟ್ಟಿದ್ದಾರೆ. ಆ ಮೂಲಕ ಇದೀಗ ಭ್ರಷ್ಟಾಚಾರ ನಿಗ್ರಹ ಘಟಕದ ಪುನಶ್ಚೇತನ ಕಾರ್ಯಕ್ರಮಕ್ಕೆ ಅವರು ಅರ್ಹತೆ ಪಡೆದುಕೊಂಡಿದ್ದಾರೆ.
2020ರ ಫೆಬ್ರವರಿ ತಿಂಗಳಲ್ಲಿ ಭಷ್ಟಾಚಾರ ತಡೆ ನಿಯಮ ಉಲ್ಲಂಘಿಸಿದ ಹಿನ್ನೆಲೆ ಉಮರ್ ಅಕ್ಮಲ್ ಅವರಿಗೆ ಕ್ರಿಕೆಟ್ ಆಡದಂತೆ ಮಂಡಳಿ ನಿಷೇದ ಹೇರಲಾಗಿತ್ತು. ಇದೀಗ ಭಾರೀ ಮೊತ್ತದ ದಂಡ ಪಾವತಿಸಿ ಭ್ರಷ್ಟಾಚಾರ ತಡೆ ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದ್ದಾರೆ.