ನವದೆಹಲಿ, ಜೂ. 13 (DaijiworldNews/SM): ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಸದ್ಯ ಕುತೂಹಲಕಾರಿಯಾಗಿದೆ. ಜೂನ್ 18-22ರವರೆಗೆ ಪಂದ್ಯ ನಡೆಯಲಿದೆ. ಈ ಪಂದ್ಯದ ಬಗ್ಗೆ ಹಲವಾರು ಹಿರಿಯ ಕ್ರಿಕೆಟಿಗರು ಚರ್ಚೆ ನಡೆಸಿದ್ದು, ಇದೀಗ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಪ್ರತಿಕ್ರಿಯೆ ನೀಡಿದ್ದಾರೆ.
ಟೀಂ ಇಂಡಿಯಾದ ಮೂವರು ಆಟಗಾರರ ಬಗ್ಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ಪರ ಆರಂಭಿಕ ಆಟಗಾರನಾಗಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ ಕನಿಷ್ಠ ಹತ್ತು ಓವರ್ಗಳವರೆಗೆ ಫಾರ್ಮ್ ನಲ್ಲಿ ಆಡಬೇಕು. ಕನಿಷ್ಠ ಹತ್ತು ಓವರ್ಗಳ ತನಕ ರೋಹಿತ್ ಶರ್ಮಾ ನೆಲಕಚ್ಚಿ ನಿಂತರೆ ನ್ಯೂಜಿಲೆಂಡ್ ತಂಡದ ಬೌಲರ್ ಟ್ರೆಂಟ್ ಬೌಲ್ಟ್ ಮತ್ತು ಶರ್ಮಾ ನಡುವಿನ ಕಾಳಗವನ್ನು ನೋಡಲು ಮಜವಾಗಿರುತ್ತದೆ ಎಂದಿದ್ದಾರೆ. ಅಲ್ಲದೆ ರೋಹಿತ್ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಭಾರತ ತಂಡದ ಇಬ್ಬರು ಸ್ಪಿನ್ ಬೌಲರ್ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಇಬ್ಬರೂ ಕೂಡ ನ್ಯೂಜಿಲ್ಯಾಂಡ್ ವಿರುದ್ಧ ಉತ್ತಮ ಬೌಲಿಂಗ್ ಪ್ರದರ್ಶನ ನೀಡಲಿದ್ದಾರೆ. ಇವರು ಆಲ್ ರೌಂಡರ್ ಆಗಿರುವ ಕಾರಣದಿಂದಾಗಿ, ಬ್ಯಾಟಿಂಗ್ ವಿಭಾಗದಲ್ಲೂ ನೆರವಾಗಲಿದ್ದಾರೆ ಎಂಬ ವಿಶ್ವಾಸವನ್ನು ವಿರೇಂದ್ರ ಸೆಹ್ವಾಗ್ ವ್ಯಕ್ತಪಡಿಸಿದ್ದಾರೆ.