ಪ್ಯಾರೀಸ್, ಜೂ 28 (DaijiworldNews/MS): ದೀಪಿಕಾ ಕುಮಾರಿ ಭಾನುವಾರ ನಡೆದ ಬಿಲ್ಲುಗಾರಿಕೆ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಒಂದೇ ದಿನ ಮೂರು ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.
ಮಹಿಳೆಯರ ವೈಯಕ್ತಿಕಸ್ಪರ್ಧೆಯ ಫೈನಲ್ನಲ್ಲಿ ದೀಪಿಕಾ ಕುಮಾರಿ 6-0 ಗೋಲುಗಳಿಂದ ರಷ್ಯಾದ ಎಲೆನಾ ಒಸಿಪೋವಾ ಅವರನ್ನು ಮಣಿಸಿ ಪಂದ್ಯಾವಳಿಯಲ್ಲಿ ಮೂರನೇ ಚಿನ್ನದ ಪದಕ ಗೆದ್ದರು
ಇದಕ್ಕೆ ಮುನ್ನ ಅವರು ಚಿನ್ನ ಗೆದ್ದ ಮಿಶ್ರ ಹಾಗೂ ಮಹಿಳಾ ತಂಡಗಳ ಭಾಗವಾಗಿದ್ದರು. ಮಿಶ್ರ ಫೈನಲ್ನಲ್ಲಿ, ಒಲಿಂಪಿಕ್ಸ್ ಅರ್ಚರಿಯಲ್ಲಿ್ ಭಾರತದ ಅತ್ಯುತ್ತಮ ಪದಕ ಭರವಸೆಯಿರುವ ದೀಪಿಕಾ ಮತ್ತು ಅವರ ಪತಿ ಅಟಾನು ದಾಸ್ ನೆದರ್ಲ್ಯಾಂಡ್ನ ಜೋಡಿಯನ್ನು 5-3ರಿಂದ ಹಿಮ್ಮೆಟ್ಟಿಸಿದರು. "ಇದು ಆಶ್ಚರ್ಯಕರವಾಗಿದೆ. ಮೊದಲ ಬಾರಿಗೆ ನಾವು ಒಟ್ಟಿಗೆ ಆಡುತ್ತಿದ್ದೇವೆ (ಫೈನಲ್ನಲ್ಲಿ) ಮತ್ತು ಒಟ್ಟಿಗೆ ಗೆದ್ದಿದ್ದೇವೆ, ತುಂಬಾ ಸಂತೋಷವಾಗಿದೆ" ದಂಪತಿಗಳು ಹೇಳಿದ್ದಾರೆ
ದೀಪಿಕಾ, ಅಂಕಿತಾ ಭಕತ್ ಮತ್ತು ಕೋಮಲಿಕಾ ಬ್ಯಾರಿ ಅವರ ಮಹಿಳಾ ತಂಡ ಮೆಕ್ಸಿಕೊ ವಿರುದ್ಧ ಆರಾಮದಾಯಕ ಗೆಲುವಿನೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದೆ.
ಇದಕ್ಕೆ ಮುನ್ನ ಅಭಿಷೇಕ್ ವರ್ಮಾ ಅವರು ಜೂನ್ 26 ರಂದು ವೈಯಕ್ತಿಕ ಸ್ಪರ್ಧೆಯಲ್ಲಿ ಜಯಗಳಿಸುವುದರೊಂದಿಗೆ ಭಾರತದ ಚಿನ್ನದ ಬೇಟೆ ಪ್ರಾರಂಭವಾಗಿತ್ತು.