ಲಂಡನ್, ಜು.05 (DaijiworldNews/HR): ಶ್ರೀಲಂಕಾ ಮತ್ತು ಇಂಗ್ಲೆಂಡ್ ನಡುವಣ ಎರಡನೇ ಏಕದಿನ ಪಂದ್ಯದಲ್ಲಿ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ದಿನೇಶ್ ಕಾರ್ತಿಕ್ ಕ್ಷಮೆಯಾಚಿಸಿದ್ದಾರೆ ಎಂದು ತಿಳಿದು ಬಂದಿದೆ.
ದಿನೇಶ್ ಕಾರ್ತಿಕ್ ಅವರು ಕಾಮೆಂಟರಿ ನೀಡುತ್ತಾ, 'ಕ್ರಿಕೆಟ್ ಬ್ಯಾಟ್' ಅನ್ನು ನೆರೆಮನೆಯ ಪತ್ನಿಗೆ ಹೋಲಿಕೆ ಮಾಡಿದ್ದರು ಎನ್ನಲಾಗಿದೆ.
ಇನ್ನು ಈ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಕಾರ್ತಿಕ್ ಕ್ಷಮೆಯಾಚಿಸಿದ್ದಾರೆ.
ಅನೇಕ ಬ್ಯಾಟ್ಸ್ಮನ್ಗಳು ತಮ್ಮ ಬ್ಯಾಟ್ ಇಷ್ಟಪಡುವುದಿಲ್ಲ. ಅವರು ಇನ್ನೊಬ್ಬ ಆಟಗಾರನ ಬ್ಯಾಟ್ ಅನ್ನು ಇಷ್ಟಪಡುತ್ತಾರೆ. ಬ್ಯಾಟ್ಗಳು ನೆರೆಮನೆಯವನ ಪತ್ನಿಯ ಹಾಗೆ, ಯಾವತ್ತೂ ಸುಂದರವಾಗಿ ಕಾಣುತ್ತದೆ ಎಂದು ಕಾರ್ತಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಕುರಿತು ಹೇಳಿಕೆ ನೀಡಿರುವ ಕಾರ್ತಿಕ್, "ಕಳೆದ ಪಂದ್ಯದಲ್ಲಿ ನಾನು ಬ್ಯಾಟ್ಗಳು ನೆರೆಮನೆಯವನ ಪತ್ನಿಯ ಹಾಗೆ ಎಂಬ ಹೇಳಿಕೆ ನೀಡಿದ್ದು, ಈ ಸಂಬಂಧ ಕ್ಷಮೆಯಾಚಿಸಲು ಬಯಸುತ್ತೇನೆ. ನಿಜವಾಗಿಯೂ ನಾನಿದನ್ನು ಉದ್ದೇಶಿಸಿದ್ದಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ಇದಕ್ಕಾಗಿ ಎಲ್ಲರಲ್ಲೂ ಕ್ಷಮೆಯಾಚಿಸುತ್ತೇನೆ"ಎಂದಿದ್ದಾರೆ.