ನವದೆಹಲಿ, ಜು 10 (DaijiworldNews/PY): ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರು 2ನೇ ಮಗುವಿನ ತಂದೆಯಾಗಿದ್ದಾರೆ.
ಹರ್ಭಜನ್ ಸಿಂಗ್ ಅವರ ಪತ್ನಿ ಗೀತಾ ಬಸ್ರಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಹರ್ಭಜನ್ ಕುಟುಂಬ ಸಂಭ್ರಮದಲ್ಲಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡಿರುವ ಹರ್ಭಜನ್, "ಗಂಡು ಮಗುವಿನ ತಂದೆಯಾಗಿದ್ದೇನೆ" ಎಂದು ಬರೆದುಕೊಂಡಿದ್ದು, ತಂದೆಯಾಗಿರುವ ವಿಚಾರವನ್ನು ಅಭಿಮಾನಗಳೊಂದಿಗೆ ಹಂಚಿಕೊಂಡಿದ್ದಾರೆ.
"ಗೀತಾ ಬಸ್ರಾ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ನಾವು ಸಂತಸದಲ್ಲಿದ್ದೇವೆ. ನಿಮ್ಮೆಲ್ಲರ ಪ್ರೀತಿ-ಹಾರೈಕೆಗೆ ನಾವು ಧನ್ಯವಾದ ತಿಳಿಸುತ್ತೇವೆ" ಎಂದಿದ್ದಾರೆ.
ಹರ್ಭಜನ್ ಸಿಂಗ್ ಅವರು 2015ರ ಅಕ್ಟೋಬರ್ನಲ್ಲಿ ಗೀತಾ ಬಸ್ರಾ ಅವರನ್ನು ವಿವಾಹವಾಗಿದ್ದರು. ಹರ್ಭಜನ್ ದಂಪತಿಗೆ ಈಗಾಗಲೇ ಹಿನಯಾ ಎನ್ನುವ ಹೆನ್ಣು ಮಗು ಇದ್ದು, 2016ರಲ್ಲಿ ಮೊದಲ ಮಗು ಜನಿಸಿತ್ತು.
ಗೀತಾ ಬಸ್ರಾ ಅವರು 2006 ರಲ್ಲಿ ಇಮ್ರಾನ್ ಹಶ್ಮಿ ಅಭಿನಯದ "ದಿಲ್ ದಿಯಾ ಹೈ" ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದರು. ಹರ್ಭಜನ್ ಸಿಂಗ್ ಅವರು ಜಾನ್ ಪೌಲ್ ರಾಜ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಫ್ರೆಂಡ್ಷಿಪ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.