ಟೋಕಿಯೋ, ಜು 19 (DaijiworldNews/PY): ಟೋಕಿಯೊ ಒಲಿಂಪಿಕ್ಸ್ ಆರಂಭಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಭಾರತದ ಮೊದಲ ಒಲಿಂಪಿಕ್ ತಂಡವು ಟೋಕಿಯೊ ತಲುಪಿದೆ.
ಟೋಕಿಯೊದ ನರಿಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ ಭಾರತೀಯ ತಂಡವನ್ನು ಕುರೋಬೆ ನಗರದ ಪ್ರತಿನಿಧಿಗಳು ಸ್ವಾಗತಿಸಿದರು. ಕೇಂದ್ರ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಹಾಗೂ ಕೇಂದ್ರ ಯುವ ವ್ಯವಹಾರ ಸಚಿವರು, ಭಾರತೀಯ ಕ್ರೀಡಾಪಟುಗಳು ಸೇರಿದಂತೆ ಸಹಾಯಕ ಸಿಬ್ಬಂದಿ ಹಾಗೂ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ನ ಪ್ರತಿನಿಧಿಗಳನ್ನು ಒಳಗೊಂಡ 88 ಸದಸ್ಯರ ತಂಡವನ್ನು ಇಂದಿರಾದಲ್ಲಿ ನಡೆದ ಸಮಾರಂಭದಲ್ಲಿ ಪ್ರಸ್ತುತಪಡಿಸಿದರು.
ಆಟಗಾರರು, ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆಯ ಪ್ರಕ್ರಿಯೆಯ ಮೂಲಕ ಹೋಗಬೇಕಿದ್ದು, ಎಲ್ಲರಿಗೂ ಕ್ಲಿಯರೆನ್ಸ್ ದೊರೆತ ಬಳಿಕ ಆಟಗಾರರು ಕ್ರೀಡಾ ಗ್ರಾಮಕ್ಕೆ ತೆರಳಿದ್ದಾರೆ.
ಬಿಲ್ಲುಗಾರಿಕೆ, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಹಾಕಿ, ಜೂಡೋ, ಜಿಮ್ನಾಸ್ಟಿಕ್ಸ್, ಈಜು ಹಾಗೂ ವೇಟ್ಲಿಫ್ಟಿಂಗ್ ವಿಭಾಗದ ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ನವದೆಹಲಿಯಿಂದ ಚಾರ್ಟರ್ಡ್ ಏರ್ ಇಂಡಿಯಾ ಇಂಡಿಯಾ ಮೂಲಕ ಟೋಕಿಯೊಗೆ ಆಗಮಿಸಿದ್ದಾರೆ. ಟೋಕಿಯೋ ಒಲಿಂಪಿಕ್ಗೆ ಒಟ್ಟು 127 ಭಾರತೀಯ ಕ್ರೀಡಾಪಟುಗಳು ಅರ್ಹತೆ ಪಡೆದಿದ್ದಾರೆ.
ಸಮಾರಂಭದ ಸಂದರ್ಭ, ಅನುರಾಗ್ ಠಾಕೂರ್ ಅವರು ಆಟಗಾರರನ್ನು ಹಾರೈಸಿದ್ದು, "ತಮ್ಮ ತಂಡವು ಟೋಕಿಯೊ ಒಲಿಂಪಿಕ್ಸ್ನಲ್ಲಿ ಅತ್ಯುತ್ತಮ ಸಾಧನೆಗೈಯಬೇಕು. ತ್ರಿವರ್ಣ ಧ್ವಜದ ಗೌರವ ಹಾಗೂ ಗೌರವವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಬೇಕು. ಪಂದ್ಯಾವಳಿಗಳಲ್ಲಿ ದೇಶವನ್ನು ಪ್ರತಿನಿಧಿಸಲು ಬಂದಾಗ ಇಡೀ ರಾಷ್ಟ್ರವೇ ನಿಮ್ಮ ಹಿಂದೆ ನಿಲ್ಲುತ್ತದೆ. ಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸುವ ಭಾಗ್ಯಶಾಲಿಗಳು ನೀವು. ಈ ಅವಕಾಶ ಯಾರಿಗೂ ಸಿಗುವುದಿಲ್ಲ. ನೀವೆಲ್ಲರೂ ಟೋಕಿಯೊದಲ್ಲಿ ತ್ರಿವರ್ಣ ಧ್ವಜದ ಗೌರವನ್ನು ಉಳಿಸಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ" ಎಂದ ತಿಳಿಸಿದ್ದಾರೆ.
ಈ ಸಂದರ್ಭ ಐಒಎ ಅಧ್ಯಕ್ಷ ಡಾ.ಬಾತ್ರಾ ಕೂಡ ಆಟಗಾರರಿಗೆ ಶುಭ ಹಾರೈಸಿದರು. ಕ್ರೀಡಾ ಸಚಿವರು ಹಾಗೂ ಐಒಎ ಅಧ್ಯಕ್ಷರಿಂದ ಆಟಗಾರರ ಉತ್ಸಾಹವನ್ನು ಹೆಚ್ಚಿಸಲು ಕೆಲವು ಬಹುಮಾನದ ಹಣವನ್ನು ಘೋಷಿಸಬೇಕು ಎಂದು ರಾಜೀವ್ ಮೆಹ್ತಾ ಅವರು ಒತ್ತಾಯಿಸಿದರು.