ಟೋಕಿಯೊ, ಜು 29 (DaijiworldNews/MS): ಟೊಕಿಯೋ ಒಲಂಪಿಕ್ಸ್ ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ಪಟು ಪಿ.ವಿ.ಸಿಂಧು ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಡೆನ್ಮಾರ್ಕ್ ನ ಮಿಯಾ ಬ್ಲಿಕ್ ಫೆಲ್ಟ್ ಅವರನ್ನು ಮಣಿಸಿದರು.
ಪಿ.ವಿ. ಸಿಂಧು ಡೆನ್ಮಾರ್ಕ್ನ ಮಿಯಾ ಬ್ಲಿಚ್ಫೆಲ್ಡ್ ಅವರನ್ನು 21-15, 21-13 ಅಂತರರಿಂದ ಸೋಲಿಸಿದ್ದಾರೆ. ಇದರೊಂದಿಗೆ ಥಾಯ್ಲೆಂಡ್ ಓಪನ್ ನಲ್ಲಿನ ಬ್ಲಿಕ್ ಫೆಲ್ಟ್ ವಿರುದ್ಧದ ಸೋಲಿಗೆ ಸಿಂಧು ಒಲಿಂಪಿಕ್ಸ್ ನಲ್ಲಿ ತಿರುಗೇಟು ನೀಡಿದರು.
ಜಪಾನ್ನ ಅಕಾನೆ ಯಮಗುಚಿ ಮತ್ತು ಕೊರಿಯಾದ ಕಿಮ್ ಗೇನ್ ನಡುವಿನ ಪಂದ್ಯದ ವಿಜೇತರನ್ನು ಸಿಂಧು ಮುಂದಿನ ಪಂದ್ಯದಲ್ಲಿ ಎದುರಿಸಲಿದ್ದಾರೆ.
ಸದ್ಯ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಪಿ.ವಿ.ಸಿಂಧು ಭಾರತದ ಏಕೈಕ ಆಶಾಕಿರಣವಾಗಿದ್ದಾರೆ.