ನವದೆಹಲಿ, ಜು.30 (DaijiworldNews/HR): ಭಾರತದ ಹಿರಿಯ ಅನುಭವಿ ಬಾಕ್ಸರ್ ಮೇರಿ ಕೋಮ್ ಅವರು ಟೋಕಿಯೊ ಒಲಿಂಪಿಕ್ಸ್ನಲ್ಲಿ ರೆಫರಿ ನಿರ್ಣಯದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಗುರುವಾರ ನಡೆದ ನಿರ್ಣಾಯಕ ಪ್ರೀ-ಕ್ವಾರ್ಟರ್ಫೈನಲ್ ನಡೆಯುವ ಒಂದು ನಿಮಿಷದ ಮೊದಲು ರಿಂಗ್ ಡ್ರೆಸ್ ಬದಲಿಸಲು ಹೇಳಿರುವುದಾಗಿ ಮೇರಿ ಕೋಮ್ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮೇರಿ ಕೋಮ್, 'ಆಶ್ಚರ್ಯಕರ, ರಿಂಗ್ ಡ್ರೆಸ್ ಏನೆಂದು ಯಾರಾದರೂ ವಿವರಿಸಬಹುದೇ? ಪ್ರೀ-ಕ್ವಾರ್ಟರ್ಫೈನಲ್ ಪಂದ್ಯಕ್ಕೂ ಒಂದು ನಿಮಿಷದ ಮೊದಲು ರಿಂಗ್ ಡ್ರೆಸ್ ಬದಲಿಸುವಂತೆ ಹೇಳಲಾಯಿತು. ಯಾರಾದರೂ ಹೇಳಬಹುದೇ" ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅನುರಾಗ್ ಠಾಕೂರ್, ಕಿರಣ್ ರಿಜಿಜು ಮತ್ತು ಒಲಿಂಪಿಕ್ಸ್ಗೆ ಟ್ಯಾಗ್ ಮಾಡಿದ್ದಾರೆ.
ಇನ್ನು ಮೇರಿ ಕೋಮ್ ಮಹಿಳೆಯರ 51 ಕೆ.ಜಿ. ವಿಭಾಗದ ಪ್ರೀಕ್ವಾರ್ಟರ್ ಫೈನಲ್ನಲ್ಲಿ ಕೊಲಂಬಿಯಾದ ಇಂಗ್ರಿಟಾ ವೆಲೆನ್ಸಿಯಾ ವಿರುದ್ಧ 2-3 ರಿಂದ ಮೇರಿ ಸೋತಿದ್ದು, ಎರಡು ರೌಂಡ್ ಗೆದ್ದ ಹೊರತಾಗಿಯೂ ರೆಫರಿ ತಮ್ಮ ವಿರುದ್ಧ ನೀಡಲಾದ ತೀರ್ಪಿನ ಬಗ್ಗೆ ಮೇರಿ ಕೋಮ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.