ಕೊಲಂಬೊ, ಜು 31 (DaijiworldNews/PY): ಅಂತರಾಷ್ಟ್ರೀಯ ಕ್ರಿಕೆಟ್ಗೆ ಶ್ರೀಲಂಕಾ ಕ್ರಿಕೆಟ್ ತಂಡದ ವೇಗದ ಬೌಲರ್ ಇಸುರು ಉದಾನ ಅವರು ನಿವೃತ್ತಿ ಘೋಷಿಸಿದ್ದಾರೆ.
33 ವರ್ಷದ ಎಡಗೈ ವೇಗಿ ಇಸುರು ಉದಾನ ಅವರು ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು, ಕ್ರಿಕೆಟ್ ಲೋಕಕ್ಕೆ ಆಶ್ಚರ್ಯವನ್ನುಂಟು ಮಾಡಿದೆ.
ಇಸುರು ಉದಾನ ಅವರು ಈವರೆಗೆ 21 ಏಕದಿನ ಪಂದ್ಯಗಳು ಸೇರಿದಂತೆ 34 ಟಿ20 ಪಂದ್ಯಗಳಲ್ಲಿ ಲಂಕಾ ಪರವಾಗಿ ಆಡಿದ್ದರು. ಉದಾನ ಅವರು ಸ್ವಿಂಗ್ ಹಾಗೂ ಸ್ಲೋವರ್ ಎಸೆತಗಳಿಗೆ ಹೆಸರಾಗಿದ್ದು, ಇವರು 45 ವಿಕೆಟ್ ಕಬಳಿಸಿದ್ದರು.
ಅಂಡರ್ 19 ಮಟ್ಟದಲ್ಲಿ ತೋರಿದ ಪ್ರದರ್ಶನದ ಕಾರಣ ಉದಾನ ಅವರು 2009ರ ಟಿ20 ವಿಶ್ವಕಪ್ಗೆ ಲಂಕಾ ತಂಡಕ್ಕೆ ಆಯ್ಕೆಯಾಗಿದ್ದರು. ಗಾಯದ ಸಮಸ್ಯೆ ಹಾಗೂ ಅಸ್ಥಿರ ಪ್ರದರ್ಶನಗಳ ಕಾರಣದಿಂದ ಉದಾನ ಅವರಿಗೆ ಹೆಚ್ಚು ಪಂದ್ಯವಾಡುವ ಅವಕಾಶ ದೊರಕಿರಲಿಲ್ಲ. ಉದಾನ ಅವರು ಬ್ಯಾಟಿಂಗ್ನಲ್ಲೂ ಕೂಡಾ ಉತ್ತಮ ಪ್ರದರ್ಶನ ತೋರಿದ್ದು, 2018ರಲ್ಲಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಗೊಂಡಿದ್ದರು.
ಐಪಿಎಲ್ನಲ್ಲಿ ಇವರು ಆರ್ಸಿಬಿ ಪರ ಆಡಿದ್ದು, ಹತ್ತು ಪಂದ್ಯಗಳ ಪೈಕಿ 8 ವಿಕೆಟ್ ಕಬಳಿಸಿದ್ದರು.
ಇತ್ತೀಚೆಗೆ ಭಾರತ ತಂಡದ ವಿರುದ್ದ ಅಂತ್ಯವಾದ ಸರಣಿಯಲ್ಲೂ ಕೂಡಾ ಉದಾನ ಆಡಿದ್ದರು. ಇವರು ಮೂರು ಪಂದ್ಯವಾಡಿದ್ದು, ಆದರೆ ವಿಕೆಟ್ ಪಡೆಯಲು ವಿಫಲರಾಗಿದ್ದರು.