ಟೋಕಿಯೊ, ಆ 04 (DaijiworldNews/PY): ಟೋಕಿಯೊ ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯಲ್ಲಿ ದೀಪಕ್ ಪುನಿಯಾ ಹಾಗೂ ರವಿ ದಹಿಯಾ ಅವರು ತಮ್ಮ ತಮ್ಮ ವೈಯುಕ್ತಿಕ ವಿಭಾಗಗಳಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ರವಿ ದಹಿಯಾ ಅವರು ಪುರುಷರ 57 ಕೆ.ಜಿ ವಿಭಾಗದಲ್ಲಿ ಹಾಗೂ ದೀಪಕ್ ಪೂನಿಯಾ ಅವರು ಪುರುಷರ 86 ಕೆ.ಜಿ ವಿಭಾಗದಲ್ಲಿ ಅಂತಿಮ ನಾಲ್ಕರ ಘಟಕ್ಕೆ ಪ್ರವೇಶಿಸಿದರು.
ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ದೀಪಕ್ ಪೂನಿಯಾ ಅವರು ಚೀನಾದ ಶೂಶೆನ್ ಲಿನ್ ವಿರುದ್ದ 6-3ರಲ್ಲಿ ರೋಚಕ ಗೆಲುವು ದಾಖಲಿಸಿದ್ದು, ದೀಪಕ್ ಅವರು ಮೇಲುಗೈ ಸಾಧಿಸಿದರು.
57 ಕೆ.ಜಿ ವಿಭಾಗದಲ್ಲಿ ರವಿ ದಹಿಯಾ ಅವರು ಅಂತಿಮ ಎಂಟರ ಘಟ್ಟದಲ್ಲಿ ಹೋರಾಟ ನಡೆಸಿ ಬಲ್ಗೇರಿಯಾದ ಜಾರ್ಜಿ ವ್ಯಾಲೆಂಟಿನೋವ್ ವ್ಯಾಂಗೆಲೋವ್ ವಿರುದ್ದ 14-4ರ ಅಂತರದ ಗೆಲುವು ದಾಖಲಿಸಿದರು.