ಟೋಕಿಯೋ, ಆ 05 (DaijiworldNews/PY): ಪುರುಷರ 57 ಕೆಜಿ ಸ್ಪರ್ಧೆಯ ಫೈನಲ್ನಲ್ಲಿ ಭಾರತದ ರವಿಕುಮಾರ್ ದಹಿಯಾ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.
ಇಂದು ನಡೆದ ಫೈನಲ್ ಪಂದ್ಯದಲ್ಲಿ ರಷ್ಯಾದ ಜವೂರ್ ಉಗ್ಯೂವ್ ವಿರುದ್ದ 4-7 ಅಂತರದಿಂದ ರವಿ ಕುಮಾರ್ ಸೋಲನುಭವಿಸಿದ್ದರು.
ಸೆಮಿಫೈನಲ್ನಲ್ಲಿ ಕಜಕಿಸ್ಥಾನದ ನುರ್ ಇಸ್ಲಾಂ ಸನಾಯೆವ್ ವಿರುದ್ದ ರೋಚಕ ಹಣಾಹಣಿಯಲ್ಲಿ ಗೆದ್ದಿದ್ದ ರವಿ ಕುಮಾರ್ ಅವರು ಫೈನಲ್ ಪ್ರವೇಶಿಸಿದ್ದರು. ಇಂದು ನಡೆದ ಅಂತಿಮ ಪಂದ್ಯದಲ್ಲಿ ಉಗುವೆನ್ ವಿರುದ್ದ 4-7 ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತಪ್ತಿ ಪಡಬೇಕಾಯಿತು.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಈವರೆಗೆ ಭಾರತ ಐದು ಪದಕಗಳನ್ನು ಗೆದ್ದುಕೊಂಡಿದೆ.