ನವದೆಹಲಿ, ಆ 22 (DaijiworldNews/PY): ಮಾಜಿ ಒಲಿಂಪಿಯನ್ ಫುಟ್ಬಾಲ್ ಆಟಗಾರ, ತರಬೇತುದಾರ ಹಾಗೂ ಫಿಫಾ ರೆಫರಿ ಸೈಯದ್ ಶಾಹಿದ್ ಹಕೀಮ್ (82) ಭಾನುವಾರ ನಿಧರಾದರು.
ಕೆಲ ದಿನಗಳ ಹಿಂದೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಅವರನ್ನು ಕರ್ನಾಟಕದ ಗುಲ್ಬರ್ಗಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಭಾರತದ ಲೆಜೆಂಡರಿ ಫುಟ್ಬಾಲ್ ತರಬೇತುದಾರ ಎಸ್ ರ ರಹೀಮ್ ಅವರಪುತ್ರ ಹಕೀಮ್, 1960 ರೋಮ್ ಒಲಿಂಪಿಕ್ಸ್ನಲ್ಲಿ ಆಡಿದ್ದು, ಭಾರತೀಯ ಫುಟ್ಬಾಲ್ ತಂಡದ ಭಾಗವಾಗಿದ್ದರು. ಇವರು ಖತರ್ನಲ್ಲಿ 1988ರಲ್ಲಿ ನಡೆದಿದ್ದ ಎಎಫ್ಸಿ ಏಷ್ಯನ್ ಕಪ್ ಸೇರಿದಂತೆ 33 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ರೆಫರಿ ಆಗಿ ಕಾರ್ಯನಿರ್ವಹಿಸಿದ್ದರು.
ಇವರು ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ನೇಮಕಗೊಂಡ ರಾಷ್ಟ್ರೀಯ ತರಬೇತುದಾರರೂ ಆಗಿದ್ದರು. ಜೀವಮಾನ ಸಾಧನೆಗಾಗಿ 2017ರಲ್ಲಿ ಪ್ರತಿಷ್ಠಿತ ಧ್ಯಾನ್ ಚಂದ್ ಪ್ರಶಸ್ತಿ ಗೆದ್ದ ಎರಡನೇ ಫುಟ್ಬಾಲ್ ಆಟಗಾರರಾಗಿದ್ದಾರೆ.
ಇವರು ಭಾರತೀಯ ರಾಷ್ಟ್ರೀಯ ತಂಡದ ತರಬೇತುದಾರರಾಗಿದ್ದರು. ಹಕೀಮ್ 1960 ರ ಸಂತೋಷ್ ಟ್ರೋಫಿ ವಿಜೇತ ಸರ್ವಿಸಸ್ ತಂಡದ ಸದಸ್ಯರಾಗಿದ್ದರು. ಭಾರತ ವಾಯುಪಡೆಯೊಂದಿಗೆ ನಂಟು ಹೊಂದಿದ್ದ ಇವರು, ಸ್ಕ್ವಾಡ್ರನ್ ನಾಯಕರಾಗಿದ್ದರು.