ಟೋಕಿಯೊ, ಆ 28 (DaijiworldNews/PY): ಭಾರತದ ಭವಿನಾ ಬೆನ್ ಪಟೇಲ್ ಅವರು ಪ್ಯಾರಾಲಿಂಪಿಕ್ಸ್ ವನಿತಾ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಮಹಿಳಾ ಟೇಬಲ್ ಟೆನಿಸ್ ಸಿಂಗಲ್ಸ್ನಲ್ಲಿ ಚೀನಾದ ಮಿಯಾವೋ ಝಾಂಗ್ ಅವರ ವಿರುದ್ದ 7-11, 11-7, 11-4, 9-11, 11-8 ಸೆಟ್ಗಳ ಅಂತರದಲ್ಲಿ ಭವಿನಾ ಅವರು ಜಯ ಸಾಧಿಸಿದ್ದು, ಈ ಮೂಲಕ ಅವರು ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ಭವಿನಾ ಪಟೇಲ್ ಅವರು ಕ್ವಾರ್ಟರ್ ಫೈನಲ್ನಲ್ಲಿ ರಾಂಕೋವಿಕ್ ರಿಯೋ ಗೇಮ್ಸ್ನಲ್ಲಿ ಚಿನ್ನದ ಪದಕ ಗಳಿಸಿದ್ದರು. ಭವಿನಾ ಅವರು ಇವರ ಎದುರು 18 ನಿಮಿಷಗಳಲ್ಲಿ ಗೆದ್ದಿದ್ದಾರೆ.
ಭಾನುವಾರ ಭವಿನಾ ಪಟೇಲ್ ಅವರು ಚಿನ್ನದ ಪದಕದ ಪಂದ್ಯದಲ್ಲಿ ಚೀನಾದ ಯಿಂಗ್ ಜ್ಯೂ ಅವರನ್ನು ಎದುರಿಸಲಿದ್ದಾರೆ.
ಭಾರತದ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಿರಾಸೆ ಅನುಭಿಸಿದ್ದಾರೆ. ಸಕೀನಾ ಖಾತುನ್ ಅವರು ವನಿತಾ 50 ಕೆಜಿ ವಿಭಾಗದಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟರೆ, 50 ಕೆಜಿ ವಿಭಾಗದ ಪುರುಷರ ಸ್ಪರ್ಧೆಯಲ್ಲಿ ಜೈದೀಪ್ ಮೂರೂ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ.