ಟೋಕಿಯೊ, ಆ. 30 (DaijiworldNews/HR): ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ನಡೆದ ಪುರುಷರ ಜಾವೆಲಿನ್ (ಎಫ್ 64)ನಲ್ಲಿ ಭಾರತದ ಸುಮಿತ್ ಆಂಟಿಲ್ 68.55 ಮೀ. ಹೊಸ ವಿಶ್ವ ದಾಖಲೆಯ ಎಸೆತದೊಂದಿಗೆ ಚಿನ್ನ ಗೆದ್ದಿದ್ದಾರೆ.
ಸುಮಿತ್ ಆಂಟಿಲ್ ಅವರು ಟೋಕಿಯೊದಲ್ಲಿ ನಡೆದ ಫೈನಲ್ ನಲ್ಲಿ ಸುಮಿತ್ ಆಂಟಿಲ್ ಮೂರು ಬಾರಿ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
ಇನ್ನು ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸುವ ತಮ್ಮ ಮೊದಲ ಪ್ರಯತ್ನದಲ್ಲಿ 66.95 ಎಸೆದಿದ್ದು, ನಂತರ ತಮ್ಮ ಐದನೇ ಪ್ರಯತ್ನದಲ್ಲಿ, ಅವರು ಮತ್ತೆ 68.55 ಮೀ ಎಸೆತದೊಂದಿಗೆ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದರು.
ಆಸ್ಟ್ರೇಲಿಯಾದ ಮಿಚಲ್ ಬುರಿಯನ್ 66.29 ಮೀ.ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಬೆಳ್ಳಿ ಪದಕ ಗೆದ್ದರೆ, ಶ್ರೀಲಂಕಾದ ದುಲನ್ ಕೊಡಿತುವಾಕ್ಕು ಕಂಚಿನ ಪದಕ ಗೆದ್ದಿದ್ದಾರೆ.