ಟೋಕಿಯೋ, ಆ.31 (DaijiworldNews/HR): ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಮಂಗಳವಾರ ನಡೆದ ಪುರುಷರ 10 ಮೀ ಏರ್ ಪಿಸ್ತೂಲ್ ಎಸ್ ಎಚ್ 1 ಸ್ಪರ್ಧೆಯಲ್ಲಿ ಭಾರತದ ಸಿಂಗ್ ರಾಜ್ ಅಧಾನಾ ಅವರು ಕಂಚು ಗೆದ್ದಿದ್ದಾರೆ.
ಸಿಂಗ್ ರಾಜ್ ಅವರು 216.8 ಪಾಯಿಂಟ್ ಗಳೊಂದಿಗೆ ಕಂಚಿನ ಪದಕವನ್ನು ಗೆದ್ದಿದ್ದು, ಈವರೆಗೆ ಭಾರತ ಒಟ್ಟು ಎರಡು ಚಿನ್ನ ಗೆದ್ದಿದ್ದು, ನಾಲ್ಕು ಬೆಳ್ಳಿ ಮತ್ತು ಎರಡು ಕಂಚು ತಮ್ಮದಾಗಿಸಿದೆ. ಈ ಮೂಲಕ ಒಟ್ಟು ಎಂಟು ಪದಕವನ್ನು ಮುಡಿಗೇರಿಸಿಕೊಂಡಿದೆ.
ಇನ್ನು ಭಾರತದ ಇನ್ನೋರ್ವ ಶೂಟರ್ ಮನೀಶ್ 7ನೇ ಸ್ಥಾನ ಪಡೆದಿದ್ದಾರೆ.