ಲಂಡನ್, ಸೆ. 05 (DaijiworldNews/PY): ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರೀ ಅವರಿಗೆ ಕೊರೊನಾ ದೃಢಪಟ್ಟಿದ್ದು, ಅವರನ್ನು ಐಸೋಲೇಶನ್ಗೆ ಒಳಪಡಿಸಲಾಗಿದೆ.
ರವಿಶಾಸ್ತ್ರೀ ಅವರೊಂದಿಗೆ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಹಾಗೂ ಫಿಸಿಯೋಥೆರಪಿಸ್ಟ್ ನಿತೀನ್ ಪಟೇಲ್ ಅವರನ್ನೂ ಕೂಡಾ ಐಸೋಲೇಶನ್ಗೆ ಒಳಪಡಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ, "ಎಲ್ಲರೂ ಕೂಡಾ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದಾರೆ. ಸದ್ಯಕ್ಕೆ ತಂಡ ಹೋಟೆಲ್ನಲ್ಲಿಯೇ ಉಳಿಯಲಿದೆ. ವೈದ್ಯಕೀಯ ತಂಡ ದೃಢೀಕರಿಸುವ ತನಕ ಟೀಂ ಇಂಡಿಯಾ ಜೊತೆ ಪ್ರಯಾಣಿಸಲು ಅವಕಾಶವಿಲ್ಲ" ಎಂದು ತಿಳಿಸಿದೆ.
ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ನಡೆಯುತ್ತಿದೆ. ಇಂದು ನಾಲ್ಕನೇ ದಿನದಾಟದ ಪಂದ್ಯ ನಡೆಯುತ್ತಿದ್ದು, ಟೀಂ ಇಂಡಿಯಾ ಉತ್ತಮ ಮುನ್ನಡೆಯತ್ತ ಮುನ್ನುಗ್ಗುತ್ತಿದೆ.