ಮಾಲ್ಡೀವ್ಸ್, ಅ.02 (DaijiworldNews/PY): ಒಲಿಂಪಿಕ್ನಲ್ಲಿ ಚಿನ್ನ ಗೆದ ನೀರಜ್ ಚೋಪ್ರಾ ಭಾರತೀಯರ ಪಾಲಿಗೆ ಫೇವರೇಟ್. ಇವರು ಎಲ್ಲಿಗೆ ಹೋದ್ರೂ ಸುದ್ದಿಯಾಗುತ್ತಿದ್ದಾರೆ. ಮಾಲ್ಡೀವ್ಸ್ಗೆ ತೆರಳಿರುವ ಚೋಪ್ರ ಸಮುದ್ರದಡಿಯಲ್ಲಿ ಸ್ಕೂಬಾ ಡೈವಿಂಗ್ ಮಾಡುತ್ತಾ ಜಾವೆಲಿನ್ ಎಸೆಯುವಂತೆ ನಟಿಸಿದ್ದು, ಚಿನ್ನದ ಹುಡುಗನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾಲಿಡೇ ಮೇಲೆ ಮಾಲ್ಡೀವ್ಸ್ಗೆ ತೆರಳಿರುವ ನೀರಜ್ ಚೋಪ್ರಾ, ಸ್ಕೂಬಾ ಡೈವಿಂಗ್ ಡ್ರೆಸ್ ತೊಟ್ಟು, ನೀರಿನಲ್ಲಿ ಜಾವೆಲಿನ್ ಎಸೆಯುವಂತೆ ನಟಿಸಿದ್ದಾರೆ.
ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿರುವ ನೀರಜ್ ಚೋಪ್ರಾ, ಆಕಾಶದಲ್ಲಿ, "ನೆಲದಲ್ಲಿ ಅಥವಾ ನೀರಿನಲ್ಲಿ ನಾನು ಜಾವೆಲಿನ್ ಬಗ್ಗೆಯೇ ಯೋಚಿಸುತ್ತಿದ್ದೇನೆ. ಇದರೊಂದಿಗೆ ತರಬೇತಿ ಶುರುವಾಗಿದೆ" ಎಂದು ಬರೆದುಕೊಂಡಿದ್ದಾರೆ
ನೀರಜ್ ಚೋಪ್ರಾ ಅವರ ಈ ವಿಡಿಯೋಗೆ ಲಕ್ಷಾಂತರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟೊಕಿಯೋ ಒಲಿಂಪಿಕ್ಸ್ನ ಫೈನಲ್ನಲ್ಲಿ 87.58 ಮೀಟರ್ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದು, ಇವರ ಈ ಸಾಧನಯನ್ನು ಎಲ್ಲರೂ ಕೊಂಡಾಡಿದ್ದರು.