ದುಬೈ, ಅ. 15 (DaijiworldNews/SM): ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ ಹದಿನಾಲ್ಕನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊಲ್ಕತ್ತಾ ತಂಡವನ್ನು 27ರನ್ ಗಳಿಂದ ಮಣಿಸಿ 14ನೇ ಆವೃತ್ತಿಯ ಫೈನಲ್ ಗೆದ್ದುಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಪ್ಪತ್ತು ಓವರ್ ಗಳಲ್ಲಿ ಮೂರು ವಿಕೆಟ್ ಗಳ ನಷ್ಟಕ್ಕೆ 192 ರನ್ ಗಳಿಸಿತು. ಚೆನ್ನೈ ಪರ ಡ್ಯೂಪ್ಲೆಸಿಸ್ 86 ರನ್ ಗಳಿಸಿದರು. ರುತುರಾಜ್ ಗಾಯಕ್ವಾಡ್ 32, ಮೊಯಿನ್ ಅಲಿ 37, ಉತ್ತಪ್ಪ 31 ರನ್ ಗಳಿಸಿದರು. ಆ ಮೂಲಕ ಕೆಕೆ ಆರ್ ಗೆ ಗೆಲ್ಲಲು ಬೃಹತ್ ಮೊತ್ತದ ಗುರಿ ನೀಡಿತು.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೆಕೆಆರ್ ತಂಡ ತಕ್ಕ ಉತ್ತರವನ್ನೇ ನೀಡಿತು. ಆರಂಭಿಕರಾದ ಗಿಲ್ ಹಾಗೂ ಐಯ್ಯರ್ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಗಿಲ್ 51, ವೆಂಕಟೇಶ್ ಐಯ್ಯರ್ 50 ರನ್ ಗಳನ್ನು ಸಿಡಿಸಿದರು. ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ. ಅಂತಿಮವಾಗಿ ಶಿವಂ ಮಾವಿ 20, ಫೆರ್ಗುಸನ್ 18 ರನ್ ಸಿಡಿಸಿದರು.
ಇಪ್ಪತ್ತು ಓವರ್ ಗಳಲ್ಲಿ 9 ವಿಕೆಟ್ ಗಳಲ್ಲಿ 165 ರನ್ ಗಳಿಸಿ ಸಿಎಸ್ ಕೆ ತಂಡಕ್ಕೆ ಶರಣಾಯಿತು.