ದುಬೈ, ಅ. 18 (DaijiworldNews/SM): ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಎಣಿಸಿಕೊಂಡಿರುವ ಮಾಹಿ ಇಲ್ಲದ ಬಳಿಕ ಇದೇ ಮೊದಲ ಬಾರಿಗೆ ಟಿ-20 ವಿಶ್ವಕಪ್ ಟೂರ್ನಿ ನಡೆಯುತ್ತಿದೆ. ಧೋನಿ ಅನುಪಸ್ಥಿತಿ ಕಾಡಲಿದೆ ಎಂದು ಟೀಂ ಇಂಡಿಯಾ ಆಟಗಾರರು ಒಪ್ಪಿಕೊಂಡಿದ್ದಾರೆ.
ಧೋನಿ ಬಗ್ಗೆ ಒಂದು ದೊಡ್ಡ ವಿಚಾರವನ್ನು ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬಾಯ್ಬಿಟ್ಟಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ಮೊದಲ ಬಾರಿ ಟಿ-20 ವಿಶ್ವಕಪ್ ಆಡಬೇಕಿದೆ ಎಂದಿದ್ದಾರೆ.
ಪ್ರಮುಖ ಪಂದ್ಯಗಳಲ್ಲಿ ಗೇಮ್ ಫಿನಿಶಿಂಗ್ ಕಾರ್ಯವನ್ನು ಮಹೇಂದ್ರ ಸಿಂಗ್ ಧೋನಿ ನಡೆಸುತ್ತಿದ್ದರು. ಆ ಮೂಲಕ ಗೇಮ್ ಫಿನಿಷರ್ ಎಣಿಸಿಕೊಂಡಿದ್ದಾರೆ. ಧೋನಿ ತನಗೆ ಸಹೋದರ ಹಾಗೂ ಜೀವನದ ತರಬೇತುದಾರನಾಗಿದ್ದಾರೆ. ಅವರ ಧೋನಿ ಅನುಪಸ್ಥಿತಿಯಲ್ಲಿ ಫಿನಿಶರ್ ಎಂಬ ಭಾರವನ್ನು ತಾನು ಹೊರಬೇಕಾಗಿದೆ ಎಂದು ಹೇಳಿದ್ದಾರೆ.