ಮುಂಬೈ, ಅ.21 (DaijiworldNews/PY): 2022ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಎರಡು ಹೊಸ ಫ್ರಾಂಚೈಸಿಗಳು ಸೇರ್ಪಡೆಗೊಳ್ಳಲಿದ್ದು, ಹೊಸ ತಂಡವನ್ನು ಫುಟ್ ಬಾಲ್ ಕ್ರೀಡೆಯ ಪ್ರಸಿದ್ದ ಫ್ರಾಂಚೈಸಿ ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕರು ಖರೀದಿಸಲು ಉತ್ಸುಕರಾಗಿದ್ದಾರೆ ಎಂದು ವರದಿಯಾಗಿದೆ.
ಮ್ಯಾಂಚೆಸ್ಟರ್ ಯುನೈಡೆಟ್ ಕ್ಲಬ್ನ ಮಾಲೀಕರಾಗಿರುವ ಗ್ಲೇಜರ್ ಕುಟುಂಬ ಐಪಿಎಲ್ನಲ್ಲಿ ಹೊಸ ಫ್ರಾಂಚೈಸಿ ಹೊಂದಲು ಆಸಕ್ತಿ ಹೊಂದಿದೆ. ಅಲ್ಲದೇ, ಭಾರತೀಯ ನಿಯಂತ್ರಣ ಮಂಡಳಿ ಹೊರಡಿಸಿದ್ದ ಇನ್ವಿಟೇಶನ್ ಟು ಟೆಂಡರ್ ದಾಖಲೆಯನ್ನು ಪಡೆದುಕೊಂಡಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಸದ್ಯ ಎರಡು ಹೊಸ ತಂಡಗಳಿಗಾಗಿ ಬಿಸಿಸಿಐ ಟೆಂಡರ್ ಆಹ್ವಾನಿಸಿದ್ದು, ಗ್ಲಾಜರ್ ಕುಟುಂಬ ಈ ಕುರಿತು ಆಸಕ್ತಿ ಹೊಂದಿದೆ ಎನ್ನಲಾಗಿದೆ.
ಈಗಾಗಲೇ ಬಿಸಿಸಿಐ ಐಪಿಎಲ್ನ ಎರಡು ಹೊಸ ತಂಡಗಳ ಮಾಲೀಕತ್ವಕ್ಕೆ ಟೆಂಡರ್ ಕರೆದಿದ್ದು, ಎರಡು ಹೊಸ ಫ್ರಾಂಚೈಸಿಗಳ ಮಾಲೀಕರು ಯಾರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ.
ನೂತನ ತಂಡಗಳಿಗಾಗಿ ಬಿಡ್ಡಿಂಗ್ನಲ್ಲಿ ಭಾಗವಹಿಸುವ ಬಿಡ್ಡರ್ಗಳು 3000 ಕೋಟಿ ವ್ಯವಹಾರ ಹೊಂದರಿಬೇಕು. ಅಥವಾ 2,500 ಕೋಟಿಗೂ ಅಧಿಕ ಅಥವಾ ವೈಯಕ್ತಕ ಮೌಲ್ಯ 2500 ಕೋಟಿಯಷ್ಟಿರಬೇಕು.
ಈ ಬಿಡ್ಡಿಂಗ್ನಲ್ಲಿ ವಿದೇಶಿ ಹೂಡಿಕೆದಾರರು ಪಾಲ್ಗೊಳ್ಳಲು ತಾಂತ್ರಿಕವಾಗಿ ಅವಕಾಶ ಇದೆ. ಈ ಬಿಡ್ಡಿಂಗ್ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ನ ಮಾಲೀಕರು ಬಂದು ಭಾಗವಹಿಸಲಿದ್ದಾರೆಯೇ ಎನ್ನುವ ಬಗ್ಗೆ ನಮಗೆ ತಿಳಿದಿಲ್ಲ. ಇಲ್ಲಿಯವರೆಗೆ ತಿಳಿದುಬಂದ ಮಾಹಿತಿಯಂತೆ ಅವರು ಈ ಕುರಿತು ಆಸ್ಕಿ ಹೊಂದಿದ್ದಾರೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.