ನವದೆಹಲಿ, ಅ. 25 (DaijiworldNews/SM): ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೋಲನುಭವಿಸಿದ ಬಳಿಕ ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಅವರು ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಆದರೆ, ಟೀಂ ಇಂಡಿಯಾದ ಮಾಜಿ ಆಟಗಾರರು ಸೆಹ್ವಾಗ್ ಬೆಂಬಲಕ್ಕೆ ನಿಂತಿದ್ದಾರೆ.
ಮಾಜಿ ಆಟಗಾರರಾದ ವಿರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಸೇರಿದಂತೆ ಹಲವು ಆಟಗಾರರು ಮಾಜಿ ಆಟಗಾರರು ಶಮಿ ಪರ ಬ್ಯಾಟ್ ಬೀಸಿದ್ದಾರೆ. ರನಿವಾರ ನಡೆದ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಮೊಹಮ್ಮದ್ ಶಮಿ 3.5 ಓವರ್ ಗಳಲ್ಲಿ 43 ರನ್ ನೀಡುವ ಮೂಲಕ ಟೀಂ ಇಂಡಿಯಾ ಪಾಲಿಗೆ ದುಬಾರಿಯೆಣಿಸಿಕೊಂಡಿದ್ದರು. ಇದರಿಂದಾಗಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಹತ್ತು ವಿಕೆಟ್ ಗಳಿಂದ ಹೀನಾಯ ಸೋಲುಂಡಿತ್ತು.
ಈ ನಡುವೆ ಮೊಹಮ್ಮದ್ ಶಮಿ ಕುರಿತು ಆನ್ ಲೈನ್ ನಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. ಆದರೆ, ಮಾಜಿ ಆಟಗಾರರು ಶಮಿ ಬೆಂಬಲಕ್ಕೆ ನಿಂಟಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಮುಂದಿನ ಪಂದ್ಯದಲ್ಲಿ ನಿಮ್ಮ ಸಾಮಾರ್ಥ್ಯ ಸಾಬೀತು ಪಡಿಸಿ ಎಂದಿದ್ದಾರೆ.