ನವದೆಹಲಿ, ಅ 26 (DaijiworldNews/MS): ಭಾನುವಾರ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯಾಟದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 10 ವಿಕೆಟ್ಗಳಿಂದ ಸೋತ ಟೀಮ್ ಇಂಡಿಯಾ ಆರಂಭದಲ್ಲಿಯೇ ದೊಡ್ಡ ಹಿನ್ನಡೆ ಅನುಭವಿಸಿದ್ದು ಈ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ಥಾನ ತಂಡ ನಮ್ಮ ತಂಡಕ್ಕಿಂತಲೂ ಅತ್ಯುತ್ತಮ ಪ್ರದರ್ಶನ ತೋರಿದೆ ಎಂಬುದನ್ನು ಒಪ್ಪಿಕೊಳ್ಳಲು ನಾಚಿಕೆಪಡಬೇಕಾದ ಅಗತ್ಯವಿಲ್ಲ. ಈ ಸೋಲಿನಿಂದ ನಮ್ಮ ವಿಶ್ವಕಪ್ ಅಭಿಯಾನ ಅಂತ್ಯವಾಗಿಲ್ಲ. ಈ ಪಂದ್ಯದಿಂದ ಪ್ಯಾನಿಕ್ ಬಟನ್ ಒತ್ತುವ ಅಗತ್ಯವಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.’
ನಾವು ಖಂಡಿತವಾಗಿಯೂ ಪ್ಯಾನಿಕ್ ಬಟನ್ ಒತ್ತುವ ತಂಡವಲ್ಲ, ಇದು ಪಂದ್ಯಾವಳಿಯ ಆರಂಭ, ಅಂತ್ಯವಲ. ಪಾಕಿಸ್ಥಾನ ತಂಡ ನಮ್ಮನ್ನು ಮೀರಿಸಿದ ಪ್ರದರ್ಶನ ತೋರಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಪಂದ್ಯದಲ್ಲಿ ನಮಗೆ ಯಾವುದೇ ಅವಕಾಶವಿರಲಿಲ್ಲ. ಟಾಸ್ ಹಾಗೂ ರಾತ್ರಿಯ ಇಬ್ಬನಿಜು ಕೂಡ ಫಲಿತಾಂಶದ ಮೇಲೆ ಪರಿಣಾಮ ಬೀರಿತು.
ನಾವು ಬಯಸಿದ ವಿಷಯಗಳನ್ನು ಕಾರ್ಯಗತಗೊಳಿಸಲಿಲ್ಲಆದರೆ ನಾವು ಗರಿಷ್ಠ ಪ್ರಯತ್ನ ಮಾಡಿದ್ದೇವೆ. ಪಾಕ್ ಆಟಗಾರು ಹೆಚ್ಚು ವೃತ್ತಿಪರರು ಹಾಗಾಗಿ ಅವರಿಗೆ ಗೆಲುವಿನ ಶ್ರೇಯ ಸಲ್ಲಬೇಕುಸೋಲು-ಗೆಲುವು ಕ್ರೀಡೆಯಲ್ಲಿ ಸಾಮಾನ್ಯ. ಇದಕ್ಕೆ ಬೇರೆ ರೀತಿಯ ಬಣ್ಣ ಹಚ್ಚುವುದು ಸರಿಯಲ್ಲ’ ಎಂದು ಕೊಹ್ಲಿ ಟೀಕಿಸಿದವರನ್ನು ಕುಟುಕಿದರು.