ಬೆಂಗಳೂರು, ಅ.30 (DaijiworldNews/PY): ಟಿ20 ವಿಶ್ವಕಪ್ ಕ್ರಿಕೆಟ್ನ ಕ್ರೇಜ್ ಹೆಚ್ಚು ಮಾಡಲು ಕೂ ಆಪ್ ಕೂ ಪೆ ಬೊಲೆಗಾ ಎನ್ನುವ ಆಕರ್ಷಕ ಗೀತೆಯನ್ನು ಬಿಡುಗಡೆ ಮಾಡಿದೆ.
ಜನಪ್ರಿಯ ಗಾಯಕ ಬೆನ್ನಿ ದಯಾಳ್ ಅವರು ಸಂಗೀತ ಸಂಯೋಜಿಸಿ ಈ ಹಾಡನ್ನು ಹಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡುತ್ತಿದೆ. ಬೆನ್ನಿ ದಯಾಳ್ ಅವರು 16 ಭಾಷೆಗಳಲ್ಲಿ 2000ಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಈ ಗೀತೆ ಕೂ ಗಾಗಿ ಭಾರತೀಯ ಭಾಷೆಗಳಾದ್ಯಂತ ಬಳಕೆದಾರರ ಪ್ರತಿಕ್ರಿಯೆಯಾಗಿ ಪ್ರತಿಧ್ವನಿಸುತ್ತಿದೆ.
"ಈಗ ಕ್ರಿಕೆಟ್ ಜ್ವರ ಶುರವಾಗಿದೆ. ನಾವು ನೀಲಿ ಜರ್ಸಿಯ ಹುಡುಗರನ್ನು ಹುರಿದುಂಬಿಸಲು ಮತ್ತೊಮ್ಮೆ ತಯಾರಾಗಿದ್ದೇವೆ. ಗೆಲುವೇ ಆಗಿರಲಿ ಸೋಲೇ ಆಗಿರಲಿ, ನಮ್ಮ ಚಾಂಪಿಯನ್ಗಳಿಗಾಗಿ ಇಡೀ ರಾಷ್ಟ್ರ ಕೂ ಗೀತೆಯೊಂದಿಗೆ ಕೂ ನಲ್ಲಿ ಮಾತನಾಡಿತ್ತಾರೆ. ನನ್ನೊಂದಿಗೆ ಈ ಹಾಡಿಗೆ ದನಿಗೂಡಿಸಿ, ಉತ್ಸಾಹ ಕಳೆದುಕೊಳ್ಳದಂತೆ ಈ ಕ್ರಿಕೆಟ್ ಸೀಸನ್ ಅನ್ನು ಸಂಪೂರ್ಣ ಹುರುಪಿನೊಂದಿಗೆ ಪ್ರೋತ್ಸಾಹಿಸೋಣ" ಎಂದು ಗಾಯಕ ಬೆನ್ನಿ ದಯಾಳ್ ಕೂ ಮಾಡಿದ್ದಾರೆ.
"ನಾವು ಭಾರತೀಯರ ಆಚರಣೆಗಳ ರಾಯಭಾರಿಯಾಗಿದ್ದೇವೆ. ನಮ್ಮ ಕ್ರಿಕೆಟ್ ಗೀತೆಯನ್ನು ಗಾಯಕ ಬೆನ್ನಿ ದಯಾಳ್ ಅವರು ಅತ್ಯಂತ ಸದ್ಭುತವಾಗಿ ಸಂಯೋಜಿಸಿರುವ ವಿಚಾರ ನಮಗೆ ಗೌರವ ತಂದಿದೆ. ನಮ್ಮ ಟಿವಿಎಸ್ ಅಭಿಯಾನ, ಕೂ ಕ್ರಿಯೆಟರ್ ಕಪ್ ಹಾಗೂ ನೈಜ ಸಮಯದ ವೀಕ್ಷಕ ವಿವರಣೆಯೊಂದಿಗೆ ಬಳಕೆದಾರರು ತೊಡಗಿಸಿಕೊಂಡಾಗ ಹಾಗೂ ಕೂ ಕಿಯಾಕ್ಯಾ ಮೂಲಕ ಸಂಪರ್ಕಗೊಂಡಾಗ ಈ ಗೀತೆಯು ಆಕರ್ಷಕ ಅನುಭವ ನೀಡುತ್ತದೆ" ಎಂದು ಕೂ ವಕ್ತಾರರು ತಿಳಿಸಿದ್ದಾರೆ.