ಮುಂಬೈ, ನ.13 (DaijiworldNews/PY): ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರು ಹೊಸದೊಂದು ಬ್ರಾಂಡ್ನ ರಾಯಭಾರಿಯಾಗಲು ಸಜ್ಜಾಗಿದ್ದು, ಪರಿಸರ ಸ್ನೇಹಿ ಉಡುಗೆ-ತೊಡುಗೆಯ ಕೂಲ್ ಟ್ರೆಂಡ್ ಸೃಷ್ಟಿ ಮಾಡಲು ಮುಂದಾಗಿದ್ದಾರೆ.
ಧೋನಿ, ಇಂಡಿಯನ್ ಟೆರೇನ್ ಹೆಸರಿನ ಬ್ರಾಂಡ್ ರಾಯಭಾರಿಯಾಗಿ ನೇಮಕವಾಗಿದ್ದು, ಕ್ಯಾಶುವಲ್, ಸ್ಲೀಕ್ ಸೇರಿದಂತೆ ಅನೇಕ ರೀತಿಯ ವಸ್ತ್ರಗಳನ್ನು ಪರಿಚಯಿಸಲಿದ್ದಾರೆ.
"ಕಾಲ ಬದಲಾಗುತ್ತಿದ್ದಂತೆ ಫ್ಯಾಶನ್ ಕೂಡಾ ಬದಲಾಗುತ್ತಿದೆ. ನಮಗೆ ಹಿತವಾಗುವ ಶೈಲಿಯ ಫ್ಯಾಶನ್ ಆಯ್ದುಕೊಳ್ಳುವುದರತ್ತ ಗಮನ ಕೊಡಬೇಕು" ಎಂದಿದ್ದಾರೆ.
ಬಿಳಿ ಟೀ-ಶರ್ಟ್ ಹಾಗೂ ನೀಲಿ ಪ್ಯಾಂಟ್ನಲ್ಲಿ ಮಿಂಚುತ್ತಿರುವ ಧೋನಿ ತಮ್ಮದೇ ಫ್ಯಾಶನ್ ಹಾಗೂ ಲುಕ್ಸ್ಗಳ ಬಗ್ಗೆ ಸಾಕಷ್ಟು ಪ್ರಯೋಗಗಳನ್ನು ಮಾಡಲು ಇಚ್ಛಿಸುತ್ತಾರೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ.
ಇಂಡಿಯನ್ ಟೆರೈನ್ ಫ್ಯಾಶನ್ಸ್ ಲಿಮಿಟೆಡ್, ಪರಿಸರ ಸ್ನೇಹಿಯಾದ ಟೀ-ಶರ್ಟ್ಗಳು ಸೇರಿದಂತೆ ಪ್ಯಾಂಟ್ಗಳು ಹಾಗೂ ಶರ್ಟ್ಗಳ ವೈವಿಧ್ಯಮಯ ಆಯ್ಕೆಗಳನ್ನು ನೀಡುತ್ತಿದೆ.
ತಮ್ಮ ಖರೀದಿಯ ಜೊತೆಗೆ ಪರಿಸರದ ಮೇಲೂ ಸ್ವಲ್ಪ ಕಾಳಜಿ ಇರಲಿ ಎನ್ನುವ ಬಗ್ಗೆ ಧೋನಿ ಈ ಜಾಹೀರಾತಿನ ಮೂಲಕ ತಿಳಿಸಲಿದ್ದಾರೆ.