ನವದೆಹಲಿ, ನ 15 (DaijiworldNews/MS): ರಾಹುಲ್ ದ್ರಾವಿಡ್ ಅವರ ಪುತ್ರ ಅವರ ಅಪ್ಪನ ಬಗ್ಗೆ ನನಗೆ ದೂರು ಸಲ್ಲಿಸಿದ್ದರು. ತಂದೆ ಮನೆಯಿಂದ ದೂರವಿರಬೇಕೆಂದು ಬಯಸಿದ್ದರು ಹೀಗಾಗಿ ತಾನು ಅವರನ್ನು ಕರೆದುಕೊಂಡು ಬಂದು ಟೀಮ್ ಇಂಡಿಯಾ ಕೋಚ್ ಆಗಿ ನೇಮಿಸಿದೆ ಎಂಬುದಾಗಿ ಸೌರವ್ ಗಂಗೂಲಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.
40ನೇ ಶಾರ್ಜಾ ಅಂತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಸೌರವ್ ಗಂಗೂಲಿ ಹಾಸ್ಯಚಟಾಕಿ ಮಾಡಿ ನೆರೆದವರ ಮೊಗದಲ್ಲಿ ನಗೆಗಡಲಲ್ಲಿ ತೇಲಿಸಿದರು.
"ರಾಹುಲ್ ದ್ರಾವಿಡ್ ಅವರ ಪುತ್ರನಿಂದ ಕರೆ ಬಂದಿತ್ತು. ಆತನ ತಂದೆ ದ್ರಾವಿಡ್ ಆತನೊಂದಿಗೆ ತುಂಬಾ ಕಟ್ಟುನಿಟ್ಟಾಗಿ ವರ್ತಿಸುತ್ತಿದ್ದಾರೆ ಅವರನ್ನು ಕರೆದುಕೊಂಡು ಹೋಗಿ ಎಂದು ದೂರು ನೀಡಿದ್ದರು. ಹೀಗಾಗಿ ನಾನು ರಾಹುಲ್ (ದ್ರಾವಿಡ್) ಗೆ ಕರೆ ಮಾಡಿ ರಾಷ್ಟ್ರೀಯ ತಂಡಕ್ಕೆ ಸೇರಲು ಇದು ಸರಿಯಾದ ಸಮಯ ಎಂದು ಹೇಳಿ ಟೀಂ ಇಂಡಿಯಾ ಕೋಚ್ ಆಗಿ ನೇಮಿಸಿದೆವು" ಎಂದು ಹೇಳಿದರು.