ಮುಂಬೈ, ಡಿ.03 (DaijiworldNews/SM): ಇಲ್ಲಿನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಆರಂಭಗೊಂಡ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು, ಮೊದಲ ದಿನದಾಟದಂತ್ಯಕ್ಕೆ 70 ಓವರ್ ಗಳಲ್ಲಿ ನಾಲ್ಕು ವಿಕೆಟ್ ಗಳ ನಷ್ಟಕ್ಕೆ 221 ರನ್ ಗಳಿಸಿದೆ.
ಭಾರತದ ಪರ ಆರಂಭಿಕ ಆಟಗಾರ ಮಾಯಂಕ್ ಅಗರ್ವಾಲ್ 120 ರನ್ ಸಿಡಿಸಿ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಉಳಿದಂತೆ ಶುಭ್ ಮನ್ ಗಿಲ್ 44, ಶ್ರೇಯಸ್ ಐಯ್ಯರ್ 18 ರನ್ ಸಿಡಿಸಿದರು. 25 ರನ್ ಸಿಡಿಸಿದ ವೃದ್ದಿಮಾನ್ ಶಾಹ ನಾಳೆಗೆ ಬ್ಯಾಟಿಂಗ್ ಮುಂದುವರೆಸಲಿದ್ದಾರೆ. ಇನ್ನುಳಿದಂತೆ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ರನ್ ಗಳಿಸಲು ವಿಫಲರಾಗಿ ಶೂನ್ಯಕ್ಕೆ ಫೆವೀಲಿಯನ್ ಹಾದಿ ಹಿಡಿದರು.
ಇನ್ನು ನ್ಯೂಜಿಲ್ಯಾಂಡ್ ಪರ ಅಜಝ್ ಪಾಟೆಲ್ 4 ವಿಕೆಟ್ ಪಡೆದು ಮಿಂಚಿದರು.