ನವದೆಹಲಿ, ಡಿ.10 (DaijiworldNews/SM): ಟೀಂ ಇಂಡಿಯಾದ ಏಕದಿನ ತಂಡಕ್ಕೆ ರೋಹಿತ್ ನಾಯಕರಾಗಿದ್ದು ಇನ್ಮುಂದೆ ಹಿಟ್ ಮ್ಯಾನ್ ಕೂಲ್ ಕ್ಯಾಪ್ಟನ್ ಆಗಿ ತಂಡ ಮುನ್ನಡೆಸಲಿದ್ದಾರೆ. ಹೊಸ ನಾಯಕನ ಸುತ್ತ ಸಾವಿರಾರು ನಿರೀಕ್ಷೆಗಳು ಕ್ರಿಕೆಟ್ ಅಭಿಮಾನಿಗಳಲ್ಲಿದೆ.
ಮಹೇಂದ್ರ ಸಿಂಗ್ ಧೋನಿ ಎಲ್ಲಾ ತರಹದ ವಿಶ್ವಕಪ್ ಗಳನ್ನು ಗೆದ್ದು ತನ್ನ ಸ್ವಾಭಾವದಿಂದಲೇ ಅಭಿಮಾನಿ ವರ್ಗವನ್ನು ಪಡೆದುಕೊಂಡಿದ್ದರು. ಬಳಿಕ ತಂಡ ಮುನ್ನಡೆಸಿದ್ದ ಕೊಹ್ಲಿ ಸದಾ ವಿರಾಟ ರೂಪದಲ್ಲೇ ಬ್ಯಾಟ್ ಬೀಸುತ್ತಿದ್ದರು. ತಂಡವನ್ನು ಉತ್ತಮವಾಗಿಯೇ ನಿಭಾಯಿಸುತ್ತಿದ್ದರು. ಬಹುತೇಕ ಪಂದ್ಯಗಳಲ್ಲಿ ನಾಯಕನ ಜವಾಬ್ದಾರಿಯುತ ಆಟವಾಡಿ ತಂಡವನ್ನು ಮುನ್ನಡೆಸಿದ್ದಾರೆ. ಆದರೆ, ವಿಶ್ವಕಪ್ ಗೆಲ್ಲುವುದು ಮಾತ್ರ ಅವರ ಕೈಯಿಂದ ಸಾಧ್ಯವಾಗಿಲ್ಲ. ಎಷ್ಟೇ ಉತ್ತಮ ಪ್ರದರ್ಶನ, ಬಲಿಷ್ಟ ತಂಡ ಇದ್ದರೂ ಕೂಡ ವಿಶ್ವ ಗೆಲ್ಲುವ ಕನಸು ಕೊಹ್ಲಿಯವರಿಗೆ ಈಡೇರಿಸಲು ಸಾಧ್ಯವಾಗಿಲ್ಲ ಎನ್ನುವುದು ಅಭಿಮಾನಿಗಳಲ್ಲಿರುವ ಕೊರಗು.
ಏಕದಿನ, ಟಿ-೨೦, ಐಪಿಎಲ್ ಸೇರಿಂದ ಅನೇಕ ಟೂರ್ನಿ ಗೆಲ್ಲಲೇ ಬೇಕೆಂಬ ಕನಸು, ಅಭಿಮಾನಿಗಳ ನಿರೀಕ್ಷೆ ಹತ್ತಾರು ವರ್ಷಗಳಿಂದ ಈಡೇರಲೇ ಇಲ್ಲ. ಐಪಿಎಲ್ ನಲ್ಲಿ ಫೈನಲ್ ತನಕ ಬಂದರೂ ಕಪ್ ಎತ್ತುವ ಸುಯೋಗ ಆರ್ ಸಿಬಿಗೆ ಬಂದೊದಗಲೇ ಇಲ್ಲ.
ಪ್ರಸ್ತುತ ಭಾರತ ತಂಡದ ಏಕದಿನ ಸಾರಥ್ಯ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಅವರ ಹೆಗೆಲಿಗೆ ಸಿಕ್ಕಿದೆ. ರೋಹಿತ್ ಬ್ಯಾಟಿಂಗ್ ಗೆ ಬಂದರೆ, ರನ್ ಹೊಳೆಯೇ ಸುರಿಸುತ್ತಾರೆ ಎನ್ನುವುದು ಕೆಲವರ ಲೆಕ್ಕಾಚಾರ. ಇದನ್ನು ಅನೇಕ ಬಾರಿ ಅವರು ಸಾಧಿಸಿ ತೋರಿಸಿದ್ದಾರೆ. ಆದರೆ, ಇದೀಗ ಶರ್ಮಾ ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಅವರ ಮೇಲೆ ಹೆಚ್ಚಿನ ಒತ್ತಡವಿದೆ. ನಾಯಕ ಸ್ಥಾನ ಅಲಂಕರಿಸಿದ ಬಳಿಕ ವಿಶ್ವ ಗೆಲ್ಲ ಬಹುದು ಎನ್ನುವ ನಿರೀಕ್ಷೆಗಳಿವೆ. ಇದಕ್ಕೆ ಪೂರಕವೆಂಬಂತೆ ಐಪಿಎಲ್ ನಲ್ಲಿ ಅತ್ಯಧಿಕ ಐದು ಬಾರಿ ರೋಹಿತ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಗೆದ್ದುಕೊಂಡಿರುವುದು.
ಇದೀಗ, ರೋಹಿತ್ ಅವರು ಕೂಡ ತನ್ನ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸಲು ಮುಂದಾಗಿದ್ದಾರೆ. ಕೂಲ್ ಕಪ್ತಾನನಾಗಿ ತಂಡವನ್ನು ದಡ ಸೇರಿಸುವ ಯೋಜನೆಯನ್ನು ಹಾಕಿಕೊಂಡಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ರೋಹಿತ್ ಈಡೇರಿಸಲಿ ಎಂಬುವುದು ಹಾರೈಕೆ.