ಬೆಂಗಳೂರು, ಡಿ 18 (DaijiworldNews/MS): ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿರುವ ಟಿ-20 ಹಾಗೂ ಒಂದು ದಿನ ತಂಡದ ನಾಯಕ ರೋಹಿತ್ ಶರ್ಮಾ ಅಂಡರ್-19 ಆಟಗಾರರಿಗೆ ಟಿಪ್ಸ್ ನೀಡುವ ಕೆಲಸವನ್ನು
ಮಾಡುತ್ತಿದ್ದಾರೆ ಎಂದು ಬಿಸಿಸಿಐ ಹೇಳಿದೆ.
ಯುವ ಆಟಗಾರರಿಗೆ ಟಿಪ್ಸ್ ನೀಡುತ್ತಿರುವುದು ಫೋಟೋವನ್ನು ಬಿಸಿಸಿಐ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. ರೋಹಿತ್ ಈ ಆಟಗಾರರೊಂದಿಗೆ ಇರುವ ಫೋಟೋ ಹಂಚಿಕೊಂಡಿದ್ದು, ಭಾರತೀಯ ಕ್ರಿಕೆಟ್ನ ಭವಿಷ್ಯದ ಬಗ್ಗೆ ಚರ್ಚೆ ನಡೆದಿದೆ ಎಂಬ ಹಣೆಬರಹದಲ್ಲಿ ಟ್ವೀಟ್ ಅನ್ನು ಪೋಸ್ಟ್ ಮಾಡಲಾಗಿದೆ.
ಗಾಯಗೊಂಡಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕ್ಯಾಡೆಮಿ (ಎನ್ಸಿಎ)ನಲ್ಲಿ ರಿಹ್ಯಾಬಿಟೇಷನ್ (ಗಾಯದಿಂದ ಚೇತರಿಸಿಕೊಳ್ಳುವುದು) ಸೆಂಟರ್ ನಲ್ಲಿ ಉಳಿದುಕೊಂಡಿದ್ದಾರೆ. ಇಲ್ಲಿಯೇ ಭಾರತದ ಅಂಡರ್-19 ತಂಡ ಕೂಡ ಏಷ್ಯಾಕಪ್ ಗಾಗಿ ತಯಾರಿ ಮಾಡುತ್ತಿದೆ. ಅಂಡರ್-19 ತಂಡವು ಡಿಸೆಂಬರ್ 23 ರಿಂದ ಯುಎಇಯಲ್ಲಿ ಏಷ್ಯಾಕಪ್ ಆಡಲಿದೆ.