ನವದೆಹಲಿ, ಡಿ 27 (DaijiworldNews/MS): ಭಾರತ-ದಕ್ಷಿಣ ಆಫ್ರಿಕಾ ನಡುವಿನ ಸೆಂಚುರಿಯನ್ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ವರುಣ ಅಡ್ಡಿಯಾಗಿದ್ದಾನೆ. ಸೆಂಚುರಿಯನ್ನಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಎರಡನೇ ದಿನದ ಆಟ ಬೆಳಗ್ಗೆ ತಡವಾಗಿ ಆರಂಭವಾಗಲಿದೆ.
ಕ್ರಿಕೆಟ್ ಪ್ರೇಮಿಗಳು ಹವಾಮಾನವು ಸರಿಯಾಗಲು ಕಾಯುತ್ತಿರುವಾಗ, ಪ್ರಸಾರಕರು ದಕ್ಷಿಣ ಆಫ್ರಿಕಾದಲ್ಲಿ ಭಾರತದ ಬ್ಯಾಟರ್ ಆಡಿದ ಅತ್ಯಂತ ವಿಶೇಷವಾದ ಇನ್ನಿಂಗ್ಸ್ಗಳಲ್ಲಿ ಒಂದನ್ನು ಪ್ರಸಾರ ಮಾಡಿದ್ದಾರೆ.
ಭಾರತದ ಮಾಜಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರು 2010 ರಲ್ಲಿ ಇದೇ ಮೈದಾನದಲ್ಲಿ ಉತ್ತಮವಾಗಿ ಆಡಿ 50 ನೇ ಟೆಸ್ಟ್ ಶತಕ ಬಾರಿಸಿರುವ ವಿಶೇಷ ಮ್ಯಾಚ್ ಇದಾಗಿತ್ತು.
ದಕ್ಷಿಣ ಆಫ್ರಿಕಾದಲ್ಲಿ ತೆಂಡೂಲ್ಕರ್ ಉತ್ತಮ ದಾಖಲೆ ಹೊಂದಿದ್ದಾರೆ. ಇವರು ದಕ್ಷಿಣ ಆಪ್ರಿಕಾ ಆರು ಬಾರಿ ಪ್ರವಾಸ ಮಾಡಿದ್ದು ಆರು ಶತಕಗಳ ದಾಖಲೆ ಹೊಂದಿದ್ದಾರೆ. 1992 ರಲ್ಲಿ ಜೋಹಾನ್ಸ್ಬರ್ಗ್ನಲ್ಲಿ ಅದ್ಭುತ 111 ರನ್ಗಳೊಂದಿಗೆ ಪ್ರಾರಂಭಿಸಿ, ನಂತರ 1996 ರಲ್ಲಿ ಕೇಪ್ ಟೌನ್ನಲ್ಲಿ ಅಷ್ಟೇ ಪ್ರಭಾವಶಾಲಿಯಾಗಿ 169 ರನ್ ಗಳಿಸಿದರು. ಇದಾದ ಐದು ವರ್ಷಗಳ ಬಳಿಕ, ಜೋಹಾನ್ಸ್ಬರ್ಗ್ನಲ್ಲಿ ಸಚಿನ್ 155 ರನ್ ಗಳಿಸಿದರು. ಮತ್ತೊಮ್ಮೆ ಸರಣಿಯಲ್ಲಿ ದ್ವಿಶತಕಗಳೊಂದಿಗೆ ಕ್ರಿಕೆಟ್ ಪ್ರೇಮಿಗಳನ್ನು ಬೆರಗುಗೊಳಿಸಿದ್ದರು.