ಪ್ಯಾರಿಸ್, ಜ 03 (DaijiworldNews/HR): ಕ್ರೀಡಾಲೋಕದಲ್ಲಿ ಕೊರೊನಾ ಸೋಂಕು ಮತ್ತೊಂದು ಇನ್ನಿಂಗ್ಸ್ ಆರಂಭಿಸಿದಂತಿದ್ದು, ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಸೇರಿದಂತೆ ಪ್ಯಾರಿಸ್ ಸೇಂಟ್-ಜರ್ಮೈನ್ (ಪಿ.ಎಸ್.ಜಿ.) ತಂಡದ ಇನ್ನೂ ಮೂರು ಆಟಗಾರರಿಗೆ ಸೋಂಕು ದೃಢಪಟ್ಟಿದೆ.
ಈ ಕುರಿತು ಮಾಹಿತಿ ನೀಡಿರುವ ಪಿ.ಎಸ್.ಜಿ. ಕ್ಲಬ್, "ವಿಶ್ವದ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಕೊರೊನಾ ಸೋಂಕು ತಗುಲಿದ್ದು, ಇತ್ತೀಚಿನ ದಿನಗಳಲ್ಲಿ ಕ್ರೀಡಾ ಜಗತ್ತಿನಲ್ಲಿ ಅನೇಕ ಆಟಗಾರರು ಇದಕ್ಕೆ ಬಲಿಯಾಗುತ್ತಿದ್ದಾರೆ. ಅದರಲ್ಲಿ ಹೊಸ ಹೆಸರು ಮೆಸ್ಸಿ. ಮೆಸ್ಸಿ ಹೊರತುಪಡಿಸಿ, ಕ್ಲಬ್ನ ಇನ್ನೂ ಮೂರು ಆಟಗಾರರು ಸೋಂಕಿಗೆ ಒಳಗಾಗಿದ್ದಾರೆ. ಎಲ್ಲಾ ಆಟಗಾರರನ್ನು ಪ್ರತ್ಯೇಕಿಸಲಾಗಿದೆ" ಎಂದು ತಿಳಿಸಿದೆ.
ಇನ್ನು ಮೆಸ್ಸಿ ಹೊರತುಪಡಿಸಿ, ಎಡಗೈ ಆಟಗಾರ ಹುವಾ ಬರ್ನೆಟ್, ಬ್ಯಾಕಪ್ ಗೋಲ್ಕೀಪರ್ ಸೆರ್ಗಿಯೋ ರಿಕೊ ಮತ್ತು 19 ವರ್ಷದ ಮಿಡ್ಫೀಲ್ಡರ್ ನಾಥನ್ ಬಿಟುಮ್ಜಾಲಾ ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗಿದ್ದು, ಇದಕ್ಕೂ ಮೊದಲು ಮೊನಾಕೊ ತಂಡದಲ್ಲಿ ಏಳು ಮಂದಿಗೆ ಕೊರೊನಾ ದೃಢಪಟ್ಟಿತ್ತು.