ಜೊಹನ್ಸ್ ಬರ್ಗ್, ಜ. ೦3 (DaijiworldNews/SM): ಇಲ್ಲಿ ನಡೆಯುತ್ತಿರುವ ಭಾರತ ಹಾಗೂ ದ. ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ದ.ಆಫ್ರಿಕಾ ಗೆಲುವಿನ ಹಾದಿ ತುಳಿದಿದೆ. ಮೊದಲ ಇನ್ನಿಂಗ್ಸ್ ನಲ್ಲಿ 27 ರನ್ ಮುನ್ನಡೆ ಕಾಯ್ದುಕೊಂಡಿರುವ ದ. ಆಫ್ರಿಕಾಕ್ಕೆ ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 266 ರನ್ ಗಳ ಸವಾಲು ನೀಡಿತು.
ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಮೂರನೇ ದಿನದಾಟದಂತ್ಯಕ್ಕೆ, 40 ಓವರ್ ಗಳಲ್ಲಿ 2 ವಿಕೆಟ್ ಗಳ ನಷ್ಟಕ್ಕೆ 118 ರನ್ ಗಳಿಸಿತು ಸುಸ್ಥಿತಿಯಲ್ಲಿದೆ. ನಾಲ್ಕನೇ ದಿನ ದ. ಆಫ್ರಿಕಾ ತಂಡಕ್ಕೆ ಗೆಲ್ಲಲು ಬೇಕಾಗಿರುವುದು 122 ರನ್ ಗಳು ಮಾತ್ರ. ಅಲ್ಲದೆ ತಂಡದ ಕೈಯಲ್ಲಿ ಇನ್ನೂ ಎಂಟು ವಿಕೆಟ್ ಗಳಿವೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 63.1 ಓವರ್ ಗಳಲ್ಲಿ 202 ರನ್ ಗಳಿಗೆ ಆಲೌಟ್ ಆಗಿದೆ. ಟೀಂ ಇಂಡಿಯಾ ಪರ ನಾಯಕ ಕೆ.ಎಲ್. ರಾಹುಲ್ 50, ಮಾಯಾಂಕ್ ಅಗರ್ವಾಲ್ 26, ಅಶ್ವಿನ್ 46 ರನ್ ಗಳಿಸಿದರು. ಅಂತಿಮವಾಗಿ 202 ರನ್ ಗಳಿಗೆ ಸರ್ವ ಪತನಗೊಂಡಿತು.
ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ದ. ಆಫ್ರಿಕಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 229 ರನ್ ಗಳಿಸಿತು.