ನವದೆಹಲಿ, ಜ.09 (DaijiworldNews/PY): "ಮುಂಬರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ತಂಡ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಆಡುವುದಿಲ್ಲ" ಎಂದು ಎಸ್ಆರ್ಟಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸ್ಪಷ್ಟಪಡಿಸಿದೆ.
ಎಲ್ಎಲ್ಸಿಯು ನಿವೃತ್ತ ಆಟಗಾರರು ಕಣಕ್ಕಿಳಿಯುವ ವೃತ್ತಿಪರ ಲೀಗ್ ಆಗಿದೆ. ಲೀಗ್ನಲ್ಲಿ ಆಡುವ ಭಾರತದ ಆಟಗಾರರ ತಂಡವನ್ನು ಇತ್ತೀಚೆಗೆ ಪ್ರಕಟಿಸಲಾಗಿತ್ತು.
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರನ್ನು ಒಳಗೊಂಡ ಪ್ರಚಾರ ವೀಡಿಯೋವೊಂದರಲ್ಲಿ ಸಚಿನ್ ತೆಂಡೂಲ್ಕರ್ ಅವರು ಸಹ ಭಾಗಿಯಾಗಲಿದ್ದಾರೆ ಎಂದು ತೋರಿಸಲಾಗಿತ್ತು. ಆದರೆ, ಎಸ್ಆರ್ಟಿ ಎಸ್ಆರ್ಟಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ವಕ್ತಾರರು ಇದನ್ನು ತಿರಸ್ಕರಿಸಿದ್ಧಾರೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿ ಜನವರಿ 20ರಂದು ಪ್ರಾರಂಭವಾಗಲಿದೆ.