ನವದೆಹಲಿ, ಜ 13 (DaijiworldNews/MS): ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್ 2022 ಬ್ಯಾಡ್ಮಿಂಟನ್ ಟೂರ್ನಮೆಂಟ್ನಿಂದ ಏಳು ಆಟಗಾರರನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ತಿಳಿಸಿದೆ. ಕೊವೀಡ್ ಪರೀಕ್ಷೆಯ ವೇಳೆ ಏಳು ಆಟಗಾರರ ವರದಿಗಳು ಪಾಸಿಟಿವ್ ಎಂದು ದೃಢಪಟ್ಟ ಕಾರಣ ಆಟಗಾರರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ.
ಕೊವೀಡ್ ಪಾಸಿಟಿವ್ ವರದಿಯಲ್ಲಿ ಕಿಡಂಬಿ ಶ್ರೀಕಾಂತ್, ಅಶ್ವಿನಿ ಪೊನಪ್ಪ, ರಿತಿಕಾ ರಾಹುಲ್ ಠಕರ್, ಟ್ರೀಸಾ ಜಾಲಿ, ಮಿಥುನ್ ಮಂಜುನಾಥ್, ಸಿಮ್ರಾನ್ ಸಿಂಘಿ ಮತ್ತು ಖುಷಿ ಗುಪ್ತಾ ಸೇರಿದಂತೆ ಭಾರತದ ಅಗ್ರ ಷಟ್ಲರ್ಗಳು ಸೇರಿದ್ದಾರೆ. ಶ್ರೀಕಾಂತ್ ಪ್ರಸ್ತುತ ಸಿಂಗಲ್ಸ್ನಲ್ಲಿ ವಿಶ್ವದ ನಂ. 10 ಆಗಿದ್ದರೆ, ಮಹಿಳಾ ಡಬಲ್ಸ್ನಲ್ಲಿ ಅಶ್ವಿನಿ ಪೊನಪ್ಪ ವಿಶ್ವದ ನಂ. 20 ಆಗಿದ್ದಾರೆ ಮತ್ತು ಅವರು ಪಿ. ಸಿಕ್ಕಿ ರೆಡ್ಡಿ ಅವರೊಂದಿಗೆ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಮಂಗಳವಾರ ನಡೆಸಿದ ಕಡ್ಡಾಯ ಆರ್ಟಿ-ಪಿಸಿಆರ್ ಪರೀಕ್ಷೆಯ ವರದಿಯಲ್ಲಿ ಆಟಗಾರರು ಪಾಸಿಟಿವ್ ಆಗಿರುವ ಕಾರಣ ಹಿಂದಿರುಗಿಸಿದ್ದಾರೆ. ಏಳು ಆಟಗಾರರ ನಿಕಟ ಸಂಪರ್ಕವನ್ನು ಪರಿಗಣಿಸಿದ ಡಬಲ್ಸ್ ಪಾಲುದಾರರನ್ನು ಪಂದ್ಯಾವಳಿಯಿಂದ ಹಿಂತೆಗೆದುಕೊಳ್ಳಲಾಗಿದೆ, ”ಎಂದು ಬಿಡಬ್ಲ್ಯೂಎಫ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.