ಕೋಲ್ಕತ್ತ, ಜ 22 (DaijiworldNews/HR): ಭಾರತ ಫುಟ್ಬಾಲ್ ತಂಡದ ದಿಗ್ಗಜ ಆಟಗಾರ, ಕೋಚ್ ಆಗಿದ್ದ ಸುಭಾಷ್ ಭೌಮಿಕ್ (72) ಅನಾರೋಗ್ಯದಿಂದ ಶನಿವಾರ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಸುಭಾಷ್ ಭೌಮಿಕ್ ಅವರು 1970 ರಲ್ಲಿ ಕಂಚು ಪದಕ ಗೆದ್ದಿದ್ದು, ಏಷ್ಯನ್ ಗೇಮ್ಸ್ ತಂಡದಲ್ಲಿ ಮಿಡ್ ಫೀಲ್ಡರ್ ಆಗಿದ್ದರು.
ಇನ್ನು ಮಧುಮೇಹ, ಕಿಡ್ನಿ ಸಂಬಂಧಿತ ಸಮಸ್ಯೆಗಳಿಂದ ಸುಭಾಷ್ ಭೌಮಿಕ್ ಅವರು ಬಳಲುತ್ತಿದ್ದು, 23 ವರ್ಷಗಳ ಹಿಂದೆ ಅವರು ಬೈ ಪಾಸ್ ಶಸ್ತ್ರಚಿಕಿತ್ಸೆ ಎದುರಿಸಿದ್ದರು.
ಸುಭಾಷ್ ಭೌಮಿಕ್ ಅವರು ಫುಟ್ಬಾಲ್ನಿಂದ ನಿವೃತ್ತಿಪಡೆದ ಬಳಿಕ ತರಬೇತಿದಾರರಾಗಿ ಕಾರ್ಯನಿರ್ವಹಿಸತೊಡಗಿದದು, ಅವರ ಮಾರ್ಗದರ್ಶನದಲ್ಲೇ ಅನೇಕ ಗೆಲುವು ಭಾರತಕ್ಕೆ ಬಂದಿದೆ.