ಹಿಮಾಚಲ ಪ್ರದೇಶ, ಜ.27 (DaijiworldNews/KP): ಭಾರತ ಹಾಕಿ ತಂಡದ ಮಾಜಿ ನಾಯಕ ಹಾಗೂ ದಿಗ್ಗಜ ಆಟಗಾರ ಚರಂಜಿತ್ ಸಿಂಗ್ (92) ವಯೋ ಸಹಜ ಕಾಯಿಲೆಯಿಂದ ಗುರುವಾರ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಚರಂಜಿತ್ ಸಿಂಗ್ ನಾಯಕತ್ವದಲ್ಲಿ 1964 ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದಿದ್ದು, 1960 ರಲ್ಲಿ ರೋಮ್ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಇವರ ತಂಡದ ಭಾಗವಹಿಸಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿತ್ತು, ಅಲ್ಲದೆ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಒಲಿಯುವಲ್ಲಿ ಚರಂಜಿತ್ ಸಿಂಗ್ ಕೂಡ ಪ್ರಮುಖ ಪಾತ್ರ ವಹಿಸಿದರು.
ಚರಂಜಿತ್ ಅವರು ಭಾರತೀಯ ಹಾಕಿಯ ಸುವರ್ಣ ಯುಗದ ಭಾಗವಾಗಿದ್ದರು. ಇವರು ಅರ್ಜುನ ಪ್ರಶಸ್ತಿಯ ಮತ್ತು ಪದ್ಮಶ್ರೀ ಗೌರವವಕ್ಕೂ ಭಾಜನರಾಗಿದ್ದರು.
ಚರಂಜಿತ್ ಸಿಂಗ್ ಹಿಮಾಚಲದ ಉನಾದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.