ಬೆಂಗಳೂರು, ಫೆ 12 (DaijiworldNews/MS): ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಮೆಗಾ ಹರಾಜಿನ ಮಧ್ಯದಲ್ಲಿ ಹರಾಜುದಾರ ಹ್ಯೂ ಎಡ್ಮೀಡ್ಸ್ ಕುಸಿದು ಬಿದ್ದ ಪರಿಣಾಮ ಹರಾಜು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಶ್ರೀಲಂಕಾದ ವನಿಂದು ಹಸರಂಗಾಗೆ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ತೊಡಗಿದ್ದಾಗ ಎಡ್ಮೀಡ್ಸ್ ವೇದಿಕೆಯ ಮೇಲೆ ಕುಸಿದರು. ಹೀಗಾಗಿ ಮೆಗಾ ಹರಾಜು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಹರಾಜಿನ ವೇಳೆಯೇ ಪ್ರಜ್ಞೆ ತಪ್ಪಿ ವೇದಿಕೆ ಮೇಲಿಂದ ಕೆಳಗೆ ಬಿದ್ದಿದ್ದಾರೆ.
ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ನ ಅಪ್ಡೇಟ್ ಪ್ರಕಾರ, ಎಡ್ಮೀಡ್ಸ್ ಆರೋಗ್ಯವಾಗಿದ್ದಾರೆ ಮತ್ತು ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧ್ಯಾಹ್ನ 3:30ಕ್ಕೆ ಹರಾಜು ಮರುಪ್ರಾರಂಭಿಸಲು ನಿರ್ಧರಿಸಲಾಗಿದೆ.
ಹ್ಯೂ ಎಡ್ಮಿಡ್ಸ್ ವಿಶ್ವದ ಪ್ರಮುಖ ಹರಾಜು ನಿರ್ವಾಹಕರಲ್ಲಿ ಒಬ್ಬರಾಗಿದ್ದು ಅವರು 2019 ರಿಂದ ಐಪಿಎಲ್ ಹರಾಜು ನಡೆಸುತ್ತಿದ್ದಾರೆ. ಅವರು 3 ವರ್ಷಗಳ ಹಿಂದೆ ರಿಚರ್ಡ್ ಮ್ಯಾಡ್ಲಿ ಬದಲಾಗಿ ಈ ಹರಾಜು ಪ್ರಕ್ರಿಯೆಲ್ಲಿ ಹರಾಜು ನಡೆಸಿಕೊಡುವವರಾಗಿ ಪಾಲ್ಗೊಳ್ಳುತ್ತಿದ್ದರು.60 ವರ್ಷ ವಯಸ್ಸಿನ ಹ್ಯೂ ಎಡ್ಮಿಡ್ಸ್ ಪ್ರಪಂಚದಾದ್ಯಂತ 2300 ಕ್ಕೂ ಹೆಚ್ಚು ಹರಾಜುಗಳನ್ನು ಮಾಡಿದ್ದಾರೆ. ಮೊದಲ ಹರಾಜನ್ನು 1984 ರಲ್ಲಿ ಹ್ಯೂ ಎಡ್ಮಿಡ್ಸ್ ನಡೆಸಿ ಕೊಟ್ಟಿದ್ದರು.