ಹೈದರಾಬಾದ್, ಫೆ. 19 (DaijiworldNews/SM): ವಿರಾಟ್ ಕೊಹ್ಲಿ ಕ್ರಿಕೆಟ್ ನ ಎಲ್ಲಾ ವಿಭಾಗಗಳ ನಾಯಕತ್ವಕ್ಕೂ ರಾಜೀನಾಮೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ರೋಹಿತ್ ಶರ್ಮಾ ಎಲ್ಲಾ ವಿಭಾಗಕ್ಕೂ ನಾಯಕನಾಗಿದ್ದಾರೆ. ಟೆಸ್ಟ್ ಕ್ರಿಕೆಟ್ ಗೆ ರೋಹಿತ್ ಅವರನ್ನು ನಾಯಕನಾಗಿಸುವ ಮೂಲಕ ಇದೀಗ ಎಲ್ಲಾ ವಿಭಾಗಕ್ಕೂ ರೋಹಿತ್ ಕಪ್ತಾನ ಎಣಿಸಿಕೊಂಡಿದ್ದಾರೆ.
ನಂತರ ರೋಹಿತ್ ಶರ್ಮಾ ಅವರು ಭಾರತ ಟೆಸ್ಟ್ ತಂಡದ ನಾಯಕರಾಗಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸುವ ಮೂಲಕ ಟೆಸ್ಟ್, ಟಿ20 ಹಾಗೂ ಏಕದಿನ ಈ ಮೂರೂ ಮಾದರಿಯಲ್ಲಿ ರೋಹಿತ್ ಶರ್ಮ ಟೀಂ ಇಂಡಿಯಾದ ನಾಯಕರಾಗಿದ್ದಾರೆ. ರೋಹಿತ್ ಶರ್ಮಾ ಅವರನ್ನು ಪೂರ್ಣಾವಧಿ ಟೆಸ್ಟ್ ತಂಡದ, ಟಿ20 ಅಂತರಾಷ್ಟ್ರೀಯ ಮತ್ತು ಏಕದಿನ ಸರಣಿ ಪಂದ್ಯಗಳ ನಾಯಕರನ್ನಾಗಿ ನೇಮಿಸಲಾಯಿತು ಎಂದು ಬಿಸಿಸಿಐ ಹೇಳಿದೆ.
ಮಾರ್ಚ್ 1 ರಂದು ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ತವರು ಟೆಸ್ಟ್ ಸರಣಿಯು ಪೂರ್ಣ ಸಮಯದ ಟೆಸ್ಟ್ ನಾಯಕನಾಗಿ ರೋಹಿತ್ ಅವರ ನಿಯೋಜನೆಯಾಗಿದೆ. ಕಳೆದ ಎರಡು ವರ್ಷಗಳಿಂದ ಟೆಸ್ಟ್ ತಂಡದ ಪ್ರಮುಖ ಸದಸ್ಯರಾಗಿರುವ ಅವರು ಕ್ರಮಾಂಕದಲ್ಲಿ ಪ್ರಮುಖರಾಗಿ ಕಾಣಿಸಿಕೊಂಡಿದ್ದಾರೆ.