ನವದೆಹಲಿ, ಮಾ. 09 (DaijiworldNews/SM): ಟೀಂ ಇಂಡಿಯಾದ ಹಿರಿಯ ಆಟಗಾರನಾಗಿದ್ದ ಹಾಗೂ ಕ್ರಿಕೆಟ್ ಜೀವನದಲ್ಲಿ ಹಲವು ಏರುಪೇರು ಅನುಭವಿಸಿದ್ದ ಕೇರಳದ ವೇಗಿ ಎಸ್. ಶ್ರೀಶಾಂತ್ ಅವರು ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್ನೊಂದಿಗೆ ಎಲ್ಲಾ ಮಾದರಿಗಳಿಂದಲೂ ನಿವೃತ್ತಿ ಹೊಂದುತ್ತಿರುವುದುದಾಗಿ ಬರೆದಿರುವ ಶ್ರೀಶಾಂತ್, ಇದು ತನಗೆ ಸ್ವಲ್ಪ ಕ್ಲಿಷ್ಟಕರ ಪರಿಸ್ಥಿತಿಯಾಗಿದೆ ಎಂದಿದ್ದಾರೆ. ಈ ಹಿಂದೆ ಟೀಂ ಇಂಡಿಯಾದಲ್ಲಿ ಮಿಂಚಿದ್ದ ಶ್ರೀಶಾಂತ್ ಬಳಿಕ ಐಪಿಎಲ್ ನಲ್ಲೂ ಆಡಿದ್ದರು. ಆದರೆ, ಐಪಿಎಲ್ 2013ರ ವೇಳೆ ಶ್ರೀಶಾಂತ್ ಮ್ಯಾಚ್ ಫಿಕ್ಸಿಂಗ್ ಆರೋಪದಿಂದಾಗಿ ನಿಷೇಧಕ್ಕೆ ಗುರಿಯಾಗಿದ್ದರು. ಬಳಿಕ ಪರಿಸ್ಥಿತಿ ಸರಿಯಾದ ಬಳಿಕ ಐಪಿಎಲ್ ಪುನರಾಗಮನವಾದರೂ ಐಪಿಎಲ್ ಹರಾಜಿನ ವೇಳೆ ಯಾವುದೇ ಫ್ರ್ಯಾಂಟೈಸಿ ಅವರನ್ನು ಖರೀದಿಸಲು ಮುಂಡಾಗಿಲ್ಲ. ಇದರಿಂದಾಗಿ ಅವರ ವೃತ್ತಿ ಜೀವನಕ್ಕೆ ಮತ್ತೊಂದೆ ಹಿನ್ನಡೆಯುಂಟಾಗಿತ್ತು.
2022ರ ಫೆಬ್ರವರಿಯಲ್ಲಿ ಶ್ರೀಶಾಂತ್ ಅವರು ಕೊನೆಯ ಪಂದ್ಯ ಮೇಘಾಲಯ ವಿರುದ್ಧ ಆಡಿದ್ದರು. ಇದರಲ್ಲಿ 2 ವಿಕೆಟ್ ಪಡೆದಿದ್ದರು.
ಇಂದು ನನಗೆ ಕಷ್ಟದ ದಿನವಾಗಿದೆ. ಜೊತೆಗೆ ಪ್ರತಿಬಿಂಬ ಮತ್ತು ಕೃತಜ್ಞತೆಯ ದಿನವಾಗಿದೆ. ಎರ್ನಾಕುಲಂ ಜಿಲ್ಲೆಯ ಇಸಿಸಿಗಾಗಿ ಆಡುವುದು ವಿಭಿನ್ನ ಅನುಭವವಾಗಿದೆ. ಕ್ರಿಕೆಟ್ ಆಟಗಾರನಾಗಿ ನನ್ನ 25 ವರ್ಷಗಳ ವೃತ್ತಿಜೀವನದುದ್ದಕ್ಕೂ, ಸ್ಪರ್ಧಾತ್ಮಕತೆ, ಉತ್ಸಾಹ, ಪರಿಶ್ರಮದ ಉನ್ನತ ಗುಣಮಟ್ಟದೊಂದಿಗೆ ತಯಾರಿ. ತರಬೇತಿ ನೀಡುವಾಗ ನಾನು ಯಾವಾಗಲೂ ಕ್ರಿಕೆಟ್ ಆಟಗಳಲ್ಲಿ ಯಶಸ್ವಿಯಾಗಲು, ಗೆಲ್ಲಲು ಶ್ರಮಿಸಿದ್ದೇನೆ. ನನ್ನ ಕುಟುಂಬ, ನನ್ನ ಸಹೋದ್ಯೋಗಿಗಳು ಮತ್ತು ಭಾರತದ ಜನರನ್ನು ಪ್ರತಿನಿಧಿಸುವುದು ನನಗೆ ಗೌರವವಾಗಿತ್ತು ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.