ಹಮಿಲ್ಟನ್, ಮಾ.22(DaijiworldNews/SM): ಬಾಂಗ್ಲಾದೇಶದ ವಿರುದ್ಧ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮಹತ್ವದ ಪಂದ್ಯವನ್ನು ಗೆದ್ದುಕೊಂಡಿದೆ. ಬಾಂಗ್ಲಾದೇಶದ ವಿರುದ್ಧ 110 ರನ್ ಗಳಿಂದ ಗೆಲುವು ದಾಖಲಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 229 ರನ್ ಪೇರಿಸಿತ್ತು. ಭಾರತ ನೀಡಿದ 230 ರನ್ ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಗುರಿ ಮುಟ್ಟಲು ವಿಫಲವಾಯಿತು. ಭಾರತೀಯ ವನಿತೆಯರು ಬಾಂಗ್ಲಾ ವನಿತೆಯರನ್ನು ರನ್ ಗಳಿಸದಂತೆ ಕಟ್ಟಿ ಹಾಕಿದರು. ಇದರಿಂದಾಗಿ ಬಾಂಗ್ಲಾ 119 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತ ಪರ ಸ್ಮೃತಿ ಮಂದಾನ 30, ಶಫಾಲಿ ವರ್ಮಾ 42 ಮತ್ತು ಯಶ್ತಿಕ ಭಾಟಿಯಾ 50 ರನ್ ಗಳಿಸಿದರು. ಬೌಲಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಸ್ನೇಹ ರಾಣಾ 4 ವಿಕೆಟ್ ಪಡೆದು ಗೆಲುವಿನ ರುವಾರಿ ಎಣಿಸಿಕೊಂಡರು.