ಆಸ್ಟ್ರೇಲಿಯಾ, ಮಾ 23 (DaijiworldNews/HR): ಕಳೆದ ಮೂರು ವರ್ಷಗಳಲ್ಲಿ ಮೂರು ಪ್ರಮುಖ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ವಿಶ್ವದ ನಂ. 1 ಟೆನಿಸ್ ಆಟಗಾರ್ತಿ ಆಶ್ಲೀಗ್ ಬಾರ್ಟಿ ಅವರು ವೃತ್ತಿಪರ ಟೆನಿಸ್ನಿಂದ ನಿವೃತ್ತಿಯಾಗುತ್ತಿರುವುದಾಗಿ ಘೋಷಿಸಿದ್ದಾರೆ.
ನಾನು ಟೆನಿಸ್ ನಿಂದ ನಿವೃತ್ತಿ ಘೋಷಿಸುತ್ತಿರುವುದು ನನಗೆ ಕಷ್ಟವೆನಿಸುತ್ತಿದೆ. ಈ ಕ್ರೀಡೆಯು ನನಗೆ ನೀಡಿದ ಎಲ್ಲದಕ್ಕೂ ನಾನು ತುಂಬಾ ಕೃತಜ್ಞನಾಗಿದ್ದೇನೆ ಮತ್ತು ಹೆಮ್ಮೆ ಮತ್ತು ತೃಪ್ತಿ ಹೊಂದಿದ್ದೇನೆ. ದಾರಿಯುದ್ದಕ್ಕೂ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.
ಇನ್ನು ಆಶ್ಲೀಗ್ ಬಾರ್ಟಿ ಅವರು 2010 ರಲ್ಲಿ ತನ್ನ ವೃತ್ತಿಪರ ಟೆನಿಸ್ ವೃತ್ತಿಜೀವನವನ್ನು ಪ್ರಾರಂಭಿಸಿ, 2014 ರಿಂದ 2016 ರವರೆಗೆ ಕ್ರೀಡೆಯಿಂದ ವಿರಾಮ ತೆಗೆದುಕೊಂಡಿದ್ದರು. ಬಳಿಕ 2017 ರಲ್ಲಿ ಪೂರ್ಣ ಸಮಯ ಟೆನಿಸ್ ಗೆ ಮರಳಿದ ಅವರು ತಮ್ಮ ಕೊನೆಯ 26 ಪಂದ್ಯಗಳಲ್ಲಿ 25 ರಲ್ಲಿ ಗೆದ್ದಿದ್ದಾರೆ.