ನವದೆಹಲಿ, ಮಾ 28 (DaijiworldNews/HR): ಮಿ.360 ಡಿಗ್ರಿ ಎಂದೇ ಖ್ಯಾತಿ ಪಡೆದು ರಾಯಲ್ ಚಾಲೆಂಜರ್ಸ್ ತಂಡದ ಪ್ರಮುಖ ಬ್ಯಾಟ್ಸ್ ಮನ್ ಆಗಿದ್ದ ಎಬಿಡಿ ವಿಲಿಯರ್ಸ್ ಹಾಗೂ ಕೊಹ್ಲಿ ಜೋಡಿಯನ್ನು ವಿಲಿಯರ್ಸ್ ಅವರ ಅನುಪಸ್ಥಿತಿಯಲ್ಲಿ ಆರ್ಸಿಬಿ ಅಭಿಮಾನಿಗಳು ಸ್ಮರಿಸಿಕೊಂಡಿದ್ದಾರೆ.
ಎಬಿಡಿ ಹಾಗೂ ಕೊಹ್ಲಿ ಜೋಡಿ ಕಳೆದ ಹಲವು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಸಾಕಷ್ಟು ಮ್ಯಾಚ್ ವಿನ್ನಿಂಗ್ಸ್ ಪ್ರದರ್ಶನ ತೋರಿದ್ದರು. ಬೊಂಬಾಟ್ ಪ್ರದರ್ಶನ ನೀಡುತ್ತಿದ್ದ ಎಬಿಡಿ-ಕೊಹ್ಲಿ ಜೋಡಿ 2022ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯಲ್ಲಿ ಆಡುತ್ತಿಲ್ಲ. ಕಳೆದ 2021ರ ಐಪಿಎಲ್ ಟೂರ್ನಿಯ ಬಳಿಕ ಎಬಿ ಡಿವಿಲಿಯರ್ಸ್ ಎಲ್ಲಾ ಸ್ವರೂಪದ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಆ ಮೂಲಕ ಆರ್ಸಿಬಿ ತಂಡದ ತಮ್ಮ ಸದಸ್ಯತ್ವವನ್ನು ಅಧಿಕೃತವಾಗಿ ಕಳೆದುಕೊಂಡಿದ್ದರು. ಆದರೆ, ಎಬಿಡಿ ವಿಲಿಯರ್ಸ್ ಹಾಗೂ ಕೊಹ್ಲಿ ಜೋಡಿ ಆಟವನ್ನು ಮಾ. 27ರಂದು ನಡೆದ ಪಂಜಾಬ್ ಹಾಗೂ ಆರ್ ಸಿಬಿ ಪಂದ್ಯಾಟದಲ್ಲಿ ಪ್ಲೆಸಿಸ್ ಹಾಗೂ ಕೊಹ್ಲಿ ಆಟವನ್ನು ಸವಿಯುವ ಮೂಲಕ ಸ್ಮರಿಸಿಕೊಂಡಿದ್ದಾರೆ.
ಮಾ. 27ರಂದು ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ 2022ರ ಐಪಿಎಲ್ ಮೂರನೇ ಪಂದ್ಯದಲ್ಲಿ 2ನೇ ವಿಕೆಟ್ ಗೆ 118 ರನ್ ಬಾರಿಸಿದ ಮಾಜಿ ಕಪ್ತಾನ ವಿರಾಟ್ ಕೊಹ್ಲಿ ಹಾಗೂ ಹಾಲಿ ಕಪ್ತಾನ ಫಾಪ್ ಡು ಪ್ಲೆಸಿಸ್ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಅಭಿಮಾನಿಗಳು ಎಬಿಡಿ ವಿಲಿಯರ್ಸ್ ಹಾಗೂ ಕೊಹ್ಲಿಯ ಜತೆಯಾಟಕ್ಕೆ ಹೋಲಿಸಿದ್ದಾರೆ. ಅಲ್ಲದೆ, ಫೀಲ್ಡಿಂಗ್ ಗೆ ಆಗಮಿಸುವಾಗಲೂ ಅವರಿಬ್ಬರು ಹೆಗಲ ಮೇಲೆ ಕೈ ಹಾಕಿಕೊಂಡು ಬಂದಿದ್ದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಹಲವು ವರ್ಷಗಳ ಕಾಲ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೋಡಿಯನ್ನು ಕಣ್ತುಂಬಿಸಿಕೊಂಡಿದ್ದ ಫ್ಯಾನ್ಸ್, ಇದೀಗ ಕೊಹ್ಲಿ ಜೊತೆ ಫಾಫ್ ಡು ಪ್ಲೆಸಿಸ್ ಅವರ ಆಟವನ್ನು ಆನಂದಿಸಿ ಖುಷಿ ಪಟ್ಟಿದ್ದಾರೆ.
ಬೆಂಗಳೂರು Vs ಪಂಜಾಬ್ ಸ್ಕೋರ್ಕಾರ್ಡ್
ಎಬಿ ಡಿವಿಲಿಯರ್ಸ್ ಇಲ್ಲದೆ 2011ರ ಬಳಿಕ ಇದೇ ಮೊದಲ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಟೂರ್ನಿ ಆಡುತ್ತಿದೆ. ಭಾನುವಾರ ನಡೆದ ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನ ಪಡೆದ ಆರ್ ಸಿಬಿ ಭರ್ಜರಿ ಪ್ರದರ್ಶನದ ಮೂಲಕ 205ರನ್ ಕಲೆ ಹಾಕಿತ್ತು. ನೂತನ ನಾಯಕ ಪ್ಲೆಸಿಸ್ ಭರ್ಜರಿ 88 ರನ್ ಹಾಗೂ ವಿರಾಟ್ ಕೊಹ್ಲಿ ಔಟಾಗದೆ 41 ರನ್ ಸಿಡಿಸಿದ್ದು ಮತ್ತು ಕೊನೆಯಲ್ಲಿ ದಿನೇಶ್ ಕಾರ್ತಿಕ್ ಸಿಡಿಲಬ್ಬರದ ಪ್ರದರ್ಶನದ 14 ಎಸೆತಗಳಲ್ಲಿ 3 ಸಿಕ್ಸರ್ 3 ಫೋರ್ ಸಹಿತ 32 ರನ್ ಗಿಟ್ಟಿಸಿಕೊಂಡಿದ್ದು ಆರ್ ಸಿಬಿ 200ರ ಗಡಿ ದಾಟಲು ಸಹಕಾರಿಯಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಬೌಲಿಂಗ್ ಪ್ರದರ್ಶನ ನೀಡದೆ ಸೋಲನುಭವಿಸಿತು ಆರ್ ಸಿಬಿ. ಪಂಜಾಬ್ ಪರ ಮಯಾಂಕ್ ಅಗರ್ವಾಲ್ 32 ರನ್, ಶಿಖರ್ ಧವನ್ 43, ಭಾನುಕ ರಾಜಪಕ್ಸ 43 ಮತ್ತು ಅಂತಿಮ ಹಂತದಲ್ಲಿ ಒಡೇನ್ ಸ್ಮಿತ್ 8ಎಸೆತಗಳಲ್ಲಿ 25ರನ್ ಹಾಗೂ ಶಾರುಖ್ ಖಾನ್ 20 ಎಸೆತಗಳಲ್ಲಿ 24 ರನ್ ಬಾರಿಸಿ ಪಂಜಾಬ್ ಗೆಲುವು ತಂದುಕೊಟ್ಟರು.