ಲಾಸೆನ್, ಆ 27(DaijiworldNews/MS): ಭಾರತದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಅವರು ಸ್ವಿಟ್ಜರ್ಲ್ಯಾಂಡ್ನಲ್ಲಿ ಲಾಸನ್ ನಲ್ಲಿ ನಡೆದ ಡೈಮಂಡ್ ಲೀಗ್ನಲ್ಲಿ ಅಗ್ರ ಸ್ಥಾನ ಪಡೆದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ದಾಖಲೆಗೆ ಪಾತ್ರರಾದರು.
ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದ ಬಳಿಕ ನೀರಜ್ ಚೋಪ್ರಾ ಗಾಯಕ್ಕೆ ತುತ್ತಾಗಿದ್ದರು. ಇದರಿಂದ ಕಾಮನ್ವೆಲ್ತ್ ಗೇಮ್ಸ್ನಿಂದ ಹೊರಗುಳಿದಿದ್ದ ನೀರಜ್ ಸ್ವಿಸ್ನ ಡೈಮಂಡ್ ಲೀಗ್ನಲ್ಲಿ 89.08 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಪ್ರಶಸ್ತಿ ಜಯಿಸಿದರು.
ಮೊದಲ ಎಸೆತದಲ್ಲಿಯೇ 89.08 ಮೀ ಎಸೆದ ನೀರಜ್, ಬಳಿಕ ಎರಡನೇ ಥ್ರೋ 85.18 ಮೀ ಆಗಿತ್ತು. 6 ನೇ ಎಸೆತದಲ್ಲಿ 80.4 ಮೀಟರ್ ಎಸೆದರು. ಲೀಗ್ನಲ್ಲಿ ಅತಿಹೆಚ್ಚು ದೂರ ಎಸೆದ ನೀರಜ್ ಚಾಂಪಿಯನ್ ಆದರು.
ಇದಕ್ಕೂ ಮೊದಲು ಡೈಮಂಡ್ ಲೀಗ್ನಲ್ಲಿ ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ಅಗ್ರ ಮೂರರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದರು.