ಮುಂಬೈ, ಆ 31 (DaijiworldNews/DB): ಕೊಹ್ಲಿ ಶತಕ ಸಿಡಿಸದ ಈ ನವೆಂಬರ್ಗೆ ಮೂರು ವರ್ಷಗಳಾಗುತ್ತಿವೆ. ಕೊಹ್ಲಿಯ ಶತಕ ನೋಡಲು ಅಭಿಮಾನಿಗಳೂ ಕಾತರಿಸುತ್ತಿದ್ದಾರೆ. ಈ ನಡುವೆ ಕೊಹ್ಲಿ ಮಾನಸಿಕ ತೊಂದರೆಗೆ ಒಳಗಾಗಿದ್ದರು ಎಂದು ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೇಳಿದ್ದಾರೆ.
ಹೌದು. ಖ್ಯಾತ ಬಾಲಿವುಡ್ ವಿಮರ್ಶಕ ಕೆಆರ್ಕೆ. ಅವರು ವಿರಾಟ್ ಕೊಹ್ಲಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಟೀಕೆಯೊಂದು ಕೊಹ್ಲಿ ಅವರು ಮಾನಸಿಕ ತೊಂದರೆಗೆ ಸಿಲುಕುವಂತೆ ಮಾಡಿತ್ತು ಎಂಬುದನ್ನು ಸ್ವತಃ ವಿರಾಟ್ ಕೊಹ್ಲಿ ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಅವರೇ ಹೇಳಿಕೊಂಡಿದ್ದಾರೆ. ಬಾಲಿವುಡ್ ಹೀರೋ, ಹೀರೋಯಿನ್ಗಳನ್ನು ಸದಾ ಟೀಕಿಸುತ್ತಲೇ ಇರುವ ಕೆಆರ್ಕೆ ಎಂದೇ ಖ್ಯಾತರಾದ ವಿಮರ್ಶಕ ಕಮಲ್ ರಶೀದ್ ಖಾನ್ ಅವರು ಕೊಹ್ಲಿ ಬಗ್ಗೆ ಟೀಕಿಸುತ್ತಾ, ನಾಯಕಿಯನ್ನು ಮದುವೆಯಾದರೆ ನನಗೂ ವಿರಾಟ್ ಕೊಹ್ಲಿ ಸ್ಥಿತಿಯೇ ಬರಬಹುದು ಎಂದಿದ್ದರಂತೆ. ಇದರಿಂದ ಕೊಹ್ಲಿ ಅವರು ಮಾನಸಿಕವಾಗಿ ತುಂಬಾ ನೊಂದಿದ್ದರು ಎನ್ನುತ್ತಾರೆ ಅನುಷ್ಕಾ.
ಆದರೆ ಈ ಟೀಕೆಗೆ ನೆಟ್ಟಿಗರಿಂದ ಕೆಆರ್ಕೆ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆಕ್ರೋಶದ ಬೆನ್ನಲ್ಲೇ ಟ್ವೀಟ್ನ್ನು ಅವರು ಅಳಿಸಿ ಹಾಕಿದ್ದರು. ಆದರೆ ಆಗಲೇ ಅದರ ಸ್ಕ್ರೀನ್ಶಾಟ್ಗಳು ಎಲ್ಲೆಡೆ ಹರಿದಾಡಿದವು. ಅಲ್ಲದೆ ಅವರ ವಿರುದ್ದ ಹಲವರು ಕೋಪಗೊಂಡಿದ್ದರು ಎಂದು ಅನುಷ್ಕಾ ತಿಳಿಸಿರುವುದಾಗಿ ವರದಿಯಾಗಿದೆ.