ದುಬೈ, ಸೆ. 01(DaijiworldNews/SM): ಏಷ್ಯಾಕಪ್ 2022 ಕ್ರಿಕೆಟ್ ಟೂರ್ನಿಯಲ್ಲಿ ಇಂದು ನಡೆದ ಪಂದ್ಯದಲ್ಲಿ ಭಾರತ ತಂಡ ಹಾಂಗ್ ಕಾಂಗ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಭಾರತ ನೀಡಿದ 193 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಹಾಂಗ್ ಕಾಂಗ್ ತಂಡ ನಿಗದಿತ 20 ಓವರ್ ಗಳಲ್ಲಿ 152ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 40 ರನ್ ಗಳ ಅಂತರದ ಹೀನಾಯ ಸೋಲು ಕಂಡಿದೆ.
ಬೃಹತ್ ಗುರಿಯನ್ನು ಬೆನ್ನು ಹತ್ತಿದ ಹಾಂಗ್ ಕಾಂಗ್ ಆರಂಭಿಕ ಆಘಾತ ಎದುರಿಸಿತು. 9 ರನ್ ಗಳಿಸಿದ್ದ ಯಾಸಿಮ್ ಮುರ್ತಾಜಾ ಅರ್ಶ್ ದೀಪ್ ಸಿಂಗ್ ಬೌಲಿಂಗ್ ನಲ್ಲಿ ಔಟಾದರು. ಈ ಆಘಾತದಿಂದ ಹಾಂಗ್ ಕಾಂಗ್ ತಂಡವನ್ನು ಬಾಬರ್ ಹಯಾತ್ ತಮ್ಮ ಸಮಯೋಚಿತ ಬ್ಯಾಟಿಂಗ್ ನಿಂದ ಹೊರತಂದರು. ಈ ಹಂತದಲ್ಲಿ 10 ರನ್ ಗಳಿಸಿದ್ದ ನಾಯಕ ನಿಜಾಕತ್ ಖಾನ್ ಔಟಾದರು. ಬಳಿಕ 41 ರನ್ ಗಳಿಸಿದ್ದ ಬಾಬರ್ ಹಯಾತ್ ಕೂಡ ಜಡೇಜಾ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.
30 ರನ್ ಗಳಿಸಿದ್ದ ಕಿಂಚಿತ್ ಶಾ, 14ರನ್ ಗಳಿಸಿದ್ದ ಎಜಾಜ್ ಖಾನ್ ಆವೇಶ್ ಖಾನ್ ಬೌಲಿಂಗ್ ನಲ್ಲಿ ಔಟಾದರು. ಅಂತಿಮವಾಗಿ ಹಾಂಗ್ ಕಾಂಗ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152ರನ್ ಗಳಿಲಷ್ಟೇ ಶಕ್ತವಾಯಿತು. ಆ ಮೂಲಕ 40 ರನ್ ಗಳ ಅಂತರದಲ್ಲಿ ಹೀನಾಯ ಸೋಲುಕಂಡಿತು. ಈ ಪಂದ್ಯದ ಜಯದ ಮೂಲಕ ಭಾರತ ಟೂರ್ನಿಯಲ್ಲಿ ಸತತ 2ನೇ ಗೆಲುವು ಸಾಧಿಸಿದಂತಾಗಿದೆ.