ವಾಷಿಂಗ್ಟನ್, ಸೆ 04 (DaijiworldNews/DB): ಯುಎಸ್ ಓಪನ್ನ ಮೂರನೇ ಸುತ್ತಿನಲ್ಲಿ ಪರಾಭವಗೊಂಡ ಅಮೆರಿಕದ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಟೆನಿಸ್ಗೆ ನಿವೃತ್ತಿ ಘೋಷಿಸಿದ್ದಾರೆ.
ಇದು ತನ್ನ ಕೊನೆಯ ಪಂದ್ಯವಾಗಿದ್ದು, ಈ ಟೂರ್ನಿ ಬಳಿಕ ಟೆನಿಸ್ಗೆ ವಿದಾಯ ಹೇಳುವುದಾಗಿ 40ರ ಹರೆಯದ ಸೆರನಾ ಯುಎಸ್ ಓಪನ್ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಹೇಳಿದ್ದರು. ಆದರೆ ಕೊನೆಯ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾದ ಆಜ್ಞಾ ಟೊಮಿಲ್ಲಾನೋವಿಕ್ ವಿರುದ್ಧ ಸೋಲೊಪ್ಪಿಕೊಳ್ಳಬೇಕಾಯಿತು. ಇದಾದ ಬಳಿಕ ನಿವೃತ್ತಿಯನ್ನು ಅಧಿಕೃತವಾಗಿ ಘೋಷಿಸಿಕೊಂಡರು. ಇದೇ ವೇಳೆ 24ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಅವರ ಕನಸು ಕೈಗೂಡಲಿಲ್ಲ.
ಸುಮಾರು 3 ಗಂಟೆ 5 ನಿಮಿಷಗಳ ಕಾಲ ಸೆರೆನಾ ಮತ್ತು ಆಜ್ಞಾ ಟೊಮಿಲ್ಲಾನೋವಿಕ್ ನಡುವೆ ಸೆಣಸಾಟ ನಡೆಯಿತಾದರೂ, ಬಳಿಕ ಸೆರೆನಾ ಸೋಲಬೇಕಾಯಿತು. 7-5, 6-7, 6-1 ಸೆಟ್ಗಳಿಂದ ಗೆಲುವು ಸಾಧಿಸಿದ ಆಜ್ಞಾ ಟೊಮಿಲ್ಲಾನೋವಿಕ್ ಮುಂದಿನ ಹಂತಕ್ಕೆ ಅರ್ಹತೆ ಗಳಿಸಿದರು.
27 ವರ್ಷಗಳ ವೃತ್ತಿಜೀವನದಲ್ಲಿ 23 ಸಿಂಗಲ್ಸ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದ ಸೆರೆನಾ ಜಗತ್ತಿನ ಪ್ರಸಿದ್ದ ಆಟಗಾರ್ತಿಯರಲ್ಲಿ ಸ್ಥಾನ ಪಡೆದುಕೊಂಡಿದ್ದರು.