ನವದೆಹಲಿ, ಸೆ 05 (DaijiworldNews/MS): ಏಷ್ಯಾಕಪ್ನಲ್ಲಿ ಭಾರತ-ಪಾಕ್ ಪಂದ್ಯದಲ್ಲಿಅರ್ಷದೀಪ್ ಕ್ಯಾಚ್ ಕೈಚೆಲ್ಲಿದ್ದರು. ಆ ಕ್ಷಣದಿಂದಲೇ ಜನರ ಕೆಂಗಣ್ಣಿಗೆ ಒಳಗಾಗಿದ್ದಾರೆ.
ಭಾರತ-ಪಾಕಿಸ್ತಾನ ಪಂದ್ಯದ ನಂತರ ಸಾಮಾಜಿಕ ಮಾಧ್ಯಮದಲ್ಲಿಅರ್ಷದೀಪ್ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ವಿಕಿಪೀಡಿಯಾದಲ್ಲಿನ ಅರ್ಶದೀಪ್ ಪುಟದಲ್ಲಿ ಖಲಿಸ್ಥಾನಿಗಳ ಜತೆ ಸಂಪರ್ಕವಿದೆ ಎಂಬ ರೀತಿ ಬಿಂಬಿಸಲಾಗಿದೆ. ಈ ಸಂಬಂಧ ಐಟಿ ಸಚಿವಾಲಯ ವಿಕಿಪೀಡಿಯಾಕ್ಕೆ ನೋಟಿಸ್ ಕಳುಹಿಸಿದೆ.
ಪಂಜಾಬಿನ ಸಿಖ್ ಜನರನ್ನ ಭಾರತದ ವಿರುದ್ಧ ಪ್ರಚೋದಿಸಲು ಇಂತಹ ಪಿತೂರಿಯನ್ನ ರೂಪಿಸಲಾಯಿತು ಎನ್ನಲಾಗುತ್ತಿದೆ. ಇದರ ಹಿಂದೆ ರಾಷ್ಟ್ರ ವಿರೋಧಿ ಶಕ್ತಿಗಳ ಷಡ್ಯಂತ್ರ ಇರುವ ಸಾಧ್ಯತೆಯಿದೆ. ಹೀಗಾಗಿ, ಪಾಕಿಸ್ತಾನ ಕೈವಾಡ ಬಗ್ಗೆ ಗುಪ್ತಚರ ಇಲಾಖೆ ತನಿಖೆ ನಡೆಸಲಿದೆ.