ಹಾಮಿಲ್ಟನ್ ಫೆ11 (SB): ಇಲ್ಲಿ ನಡೆದ ಮೂರನೇ T20 ಪಂದ್ಯದಲ್ಲಿ ಭಾರತ ನ್ಯೂಜಿಲೇಂಡ್ ತಂಡದೊಂದಿಗೆ ನಾಲ್ಕು ರನ್ ಗಳಿಗೆ ಪರಾಭವಗೊಂಡ ಬೆನ್ನಲ್ಲೇ ಇದೀಗ ಕೊನೆಯ ಓವರಿನಲ್ಲಿ ನೀರಸ ಪ್ರದರ್ಶನ ನೀಡೀದ ದಿನೇಶ್ ಕಾರ್ತಿಗೆ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಅಕ್ರೋಶ ವೆಕ್ತಪಡಿಸಿದ್ದಾರೆ.
ಟೀಂ ಸೌತಿ ಪಂದ್ಯದ ಕೊನೆಯ ಓವರ್ ಎಸೆಯಲು ಮುಂದೆ ಬಂದಾಗ ಭಾರತ ತಂಡಕ್ಕೆ ಗುರಿ ಮುಟ್ಟಲು ಹದಿನಾಲ್ಕು ರನ್ ಗಳ ಅಗತ್ಯವಿತ್ತು. ಮೊದನೇ ಎಸೆತದಿಂದ ಎರಡ್ ರನ್ ಗಳಿಸಿದ ಕಾರ್ತಿಕ್ ಮುಂದಿನ ಮೂರ್ ಎಸೆತಗಳಿಂದ ರನ್ ತೆಗೆಯದೆ ತಂಡವನ್ನು ಒತ್ತಡಕ್ಕೆ ಸಿಲುಕಿಸಿದ್ದರು. ಅದರಲ್ಲೂ ನಾಲ್ಕನೇ ಎಸೆತದಲ್ಲಿ ಸುಲಭವಾಗಿ ಒಂಟಿ ರನ್ ಗಳಿಸುವ ಅವಕಾಶ ಕಾರ್ತಿಕ್ ಮುಂದಿತ್ತು. ನಾನ್ ಸ್ಟ್ರೈಕ್ ನಲ್ಲಿದ್ದ ಕೃಣಾಲ್ ಧಾವಿಸಿ ಕಾರ್ತಿಕ್ ಹತ್ತಿರ ತಲುಪಿದ್ದರು. ಆದರೆ ಅವರನ್ನು ಹಿಂದಕ್ಕೆ ಕಳುಹಿಸಿ ಕಾರ್ತಿಕ್ ಎಲ್ಲರೂ ಬೆರಗಾಗುವಂತೆ ವರ್ತಿಸಿದ್ದರು. ನಂತರದ ಎಸೆತದಲ್ಲಿ ಒಂಟಿ ರನ್ ನೊಂದಿಗೆ ಕ್ರೀಸ್ ತಲುಪಿದ ಕೃಣಾಲ್ ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸಿದ್ದರು. ಆದರೆ ನಾಲ್ಕು ರನ್ ಗಳ ಅಭಾವದಿಂದ ಭಾರತ ತಂಡ ಪಂದ್ಯ ಹಾಗೂ ಸರಣಿಯನ್ನು ಸೋತಿತ್ತು.
ಟ್ವಿಟರ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ತಿಕ್ ವಿರುದ್ಧ ತಮ್ಮ ಅಕ್ರೋಶ ವೆಕ್ತಪಡಿಸಿರುವ ಅಭಿಮಾನಿಗಳು ಬಿಸಿಸಿಐ ಇದನ್ನು ಗಂಭೀರಬಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ .