ಪಾಕಿಸ್ತಾನ, ಫೆ 13(SM): ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯ ನಡೆಯುತ್ತದೆ ಎಂದರೆ, ಆ ಪಂದ್ಯ ವೀಕ್ಷಣೆಗೆ ಸಾಕಷ್ಟು ಅಭಿಮಾನಿಗಳು ಕುತೂಹಲದಿಂದ ಪಂದ್ಯ ವೀಕ್ಷಣೆ ಮಾಡುತ್ತಾರೆ. ಅಡಿದ ಬಹುತೇಕ ಪಂದ್ಯಗಳಲ್ಲಿ ಭಾರತವೇ ಮೋಲುಗೈ ಸಾಧಿಸಿದೆ. ಅದರಲ್ಲೂ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪಾಕ್ ಗೆ ತಲೆ ಬಾಗಿದ ಉದಾಹರಣೆಗಳಿಲ್ಲ. ಆದರೆ ಈ ಬಾರೀ ನಡೆಯುವ ವಿಶ್ವಕಪ್ ನಲ್ಲಿ ಪಾಕ್ ದಾಖಲೆ ನಿರ್ಮಿಸಲು ಮುಂದಾಗಿದೆ. ಭಾರತವನ್ನು ಮೊದಲ ಬಾರಿಗೆ ವಿಶ್ವಕಪ್ ನಲ್ಲಿ ಮಣಿಸಿ ಹೊಸತೊಂದು ಇತಿಹಾಸ ನಿರ್ಮಿಸುವುದು ಪಾಕಿಸ್ತಾನದ ಉದ್ದೇಶ.
ಬ್ಲೂ ಬಾಯ್ಸ್ ಗಳ ವಿರುದ್ಧ ವರ್ಲ್ಡ್ ಕಪ್ ನಲ್ಲಿ ಮೊದಲ ಜಯ ಗಳಿಸುತ್ತೇವೆ ಎಂದು ಪಾಕ್ ತಂಡದ ಮಾಜಿ ನಾಯಕ ಮೊಯಿನ್ ಖಾನ್ ಹೇಳಿದ್ದಾರೆ. ಕಳೆದ ಆರು ವಿಶ್ವಕಪ್ಗಳಲ್ಲಿ ಪಾಕಿಸ್ತಾನ ತಂಡಕ್ಕೆ ಟೀಂ ಇಂಡಿಯಾವನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ. 2019ರ ವಿಶ್ವಕಪ್ನಲ್ಲಿ ಕೊಹ್ಲಿ ಪಡೆ ಜೂನ್ 16ರಂದು ಪಾಕಿಸ್ತಾನ ತಂಡವನ್ನ ಎದುರಿಸಲಿದೆ. ಈ ಪದ್ಯದ ಬಗ್ಗೆ ಮಾತನಾಡಿರುವ ಮೊಯಿನ್ ಖಾನ್, ಸರ್ಫರಾಜ್ ಅಹಮ್ಮದ್ ತಂಡ ಈ ಬಾರಿ ಭಾರತವನ್ನ ಸೋಲಿಸಲಿದೆ. ಆ ಮೂಲಕ ಮೊದಲ ಬಾರಿಗೆ ಟೀಂ ಇಂಡಿಯಾದ ಎದುರು ಜಯ ಗಳಿಸಲಿದ್ದೇವೆ ಎಂಬ ವಿಶ್ವಾಸವನ್ನು ಮೊಹಿದಿನ್ ಖಾನ್ ವ್ಯಕ್ತಪಡಿಸಿದ್ದಾರೆ.
ವಿಶೇಷ ಎಂದರೆ, ಮೊಯಿನ್ ಖಾನ್ 1992 ರಿಂದ 1999 ರವರೆಗಿನ ವಿಶ್ವಕಪ್ನಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ನಡೆದ ಚಾಂಪಿಯನ್ ಟ್ರೋಫಿಯಲ್ಲಿ ಪಾಕ್ ತಂಡ ಗೆಲುವು ಸಾಧಿಸಿತ್ತು. ಇದುವೇ ಅವರ ವಿಶ್ವಾಸಕ್ಕೆ ಕಾರಣವಾಗಿದ್ದು, ಭಾರತದ ಮೇಲೆ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ನೆಲದಲ್ಲಿ ಪಾಕ್ ಬೌಲರ್ಗಳು ಅತ್ಯುತ್ತಮ ಬೌಲಿಂಗ್ ಮಾಡುವ ಮೂಲಕ ಭಾರತದ ಮೇಲೆ ಹಿಡಿತ ಸಾಧಿಸಲಿದ್ದಾರೆ. ಆ ಮೂಲಕ ಭಾರತವನ್ನು ಇಕ್ಕಟ್ಟಿನ ಸುಳಿಯಲ್ಲಿ ಕಟ್ಟಿಹಾಕಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.