ಬೆಂಗಳೂರು, ಅ 16 (DaijiworldNews/DB): ಟೀಂ ಇಂಡಿಯಾದ ಫಿಟ್ಟೆಸ್ಟ್ ಕ್ರಿಕೆಟರ್ ಆಗಿ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೆ ತನ್ನ ಫಿಟ್ನೆಸ್ನ್ನು ಸಾಬೀತುಪಡಿಸಿದ್ದಾರೆ.
ಬೆಂಗಳೂರಿನ ಎನ್ಸಿಎಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡು ಫಿಟ್ನೆಸ್ ಪರೀಕ್ಷೆಗೊಳಪಟ್ಟ ಕೊಹ್ಲಿ ವಿಶ್ವದ ನಂಬರ್ 1 ಫಿಟ್ಟೆಸ್ಟ್ ನಾಯಕ ತಾನೇ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರು ಯಾವುದೇ ಕಾರಣದಿಂದ ಗಾಯಗೊಂಡರೆ ಅವರು ಮರಳಿ ತಂಡಕ್ಕೆ ಸೇರ್ಪಡೆಯಾಗಬೇಕಾದರೆ ಬೆಂಗಳೂರಿನಲ್ಲಿ ಫಿಟ್ನೆಸ್ ಪರೀಕ್ಷೆಗೊಳಪಡಬೇಕು. ಈ ಪರೀಕ್ಷೆಯಲ್ಲಿ ಅವರು ಆಡುವುದಕ್ಕೆ ಸಮರ್ಥರಾಗಿದ್ದಾರೆಯೇ ಎಂದು ನೋಡಲಾಗುತ್ತದೆ. ಹೀಗಾಗಿ ಈ ಪರೀಕ್ಷೆಯನ್ನು ವಿರಾಟ್ ಕೊಹ್ಲಿಯೂ ಎದುರಿಸಿದ್ದು, ಕೊಹ್ಲಿ ಎ ಪ್ಲಸ್ ದರ್ಜೆಯೊಂದಿಗೆ ಫಿಟ್ನೆಸ್ ನಿರೂಪಿಸಿದ್ದಾರೆ.
ಭಾರತ ತಂಡದ 23 ಮಂದಿ ಆಟಗಾರರು 2021-22ನೇ ಸಾಲಿನಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಇಷ್ಟೂ ಮಂದಿಯ ಪೈಕಿ ವಿರಾಟ್ ಕೊಹ್ಲಿಯೇ ನಂ.1 ಎಂದು ಬಿಸಿಸಿಐ ತನ್ನ ವರದಿಯಲ್ಲಿ ತಿಳಿಸಿದ್ದಾರೆ.